ಮೇವು ನೀಡದ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗಿಳಿದ 70 ಎಮ್ಮೆಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Cheluru-Protest

ತುಮಕೂರು, ಫೆ.11– ಗೋ ಶಾಲೆಯಲ್ಲಿದ್ದ 70 ಎಮ್ಮೆಗಳಿಗೆ ಮೇವು ನೀಡದ ಅಧಿಕಾರಿಗಳ ಧೋರಣೆ ಖಂಡಿಸಿ ಎಮ್ಮೆಗಳನ್ನು ಚೇಳೂರು ಪೊಲೀಸ್ ಠಾಣೆ ಮುಂದೆ ಕರೆತಂದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಕಳೆದ ಮೂರು ದಿನಗಳಿಂದ ಗೋ ಶಾಲೆಯಲ್ಲಿದ್ದ ಎಮ್ಮೆಗಳಿಗೆ ಸರಿಯಾದ ಮೇವು ನೀಡದ ಅಧಿಕಾರಿಗಳ ಕ್ರಮ ಖಂಡಿಸಿ ರೈತರೂ ಕೂಡ ಉಪವಾಸ ಮಾಡಿ ಪ್ರತಿಭಟಿಸಿದ್ದರು. ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ.  ಮಲ್ಲಿಕಾರ್ಜುನ ಎಂಬವವರಿಗೆ ಸೇರಿದ್ದ 70 ಎಮ್ಮೆಗಳಿಗೆ ಗೋ ಶಾಲೆಯಲ್ಲಿ ಮೇವು ನೀಡದೆ ಅಧಿಕಾರಿಗಳು ಉಪವಾಸ ಹಾಕಿದ್ದರು. ನಿನ್ನ ಒಬ್ಬನದ್ದೇ 70 ಎಮ್ಮೆಗಳಿವೆ.

ಎಲ್ಲ ಮೇವು ನಿನಗೆ ಕೊಟ್ಟರೆ ಬೇರೆಯವರಿಗೆ ಎಲ್ಲಿಂದ ತರುವುದು ಎಂದು ರೈತನ ಮೇಲೆ ಅಧಿಕಾರಿಗಳು ಆಕ್ರೋಶಗೊಂಡಿದ್ದರು. ಇದರಿಂದ ಮನನೊಂದಿದ್ದ ಆತ ಚೇಳೂರು ನಾಡ ಕಚೇರಿ ಮುಂದೆ ಎಮ್ಮೆಗಳೊಂದಿಗೆ ಪ್ರತಿಭಟನೆ ನಡೆಸಿದ್ದ. ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಇಂದು ಠಾಣೆ ಮುಂದೆ ಎಮ್ಮೆಗಳನ್ನು ತಂದು ಪ್ರತಿಭಟನೆ ನಡೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin