ಹೈಕಮಾಂಡ್‍ ಕೋಟಿ ರೂ. ಕಾಣಿಕೆ ನೀಡಿದ ಆರೋಪ ಮಾಡಿದ ಬಿಎಸ್ವೈ ವಿರುದ್ಧ ಕಾಂಗ್ರೆಸ್ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--01

ಬೆಂಗಳೂರು, ಫೆ.11- ಕಾಂಗ್ರೆಸ್ ಹೈಕಮಾಂಡ್‍ಗೆ ಕರ್ನಾಟಕದಿಂದ ಒಂದು ಸಾವಿರ ಕೋಟಿ ರೂ. ದೇಣಿಗೆ ಕೊಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿರುವ ಆರೋಪಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.  ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ಇಂತಹ ಆಧಾರರಹಿತ ಆರೋಪಗಳಿಗೆ ಉತ್ತರಿಸುವ ಅಗತ್ಯವಿಲ್ಲ. ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.  ಮುಖ್ಯಮಂತ್ರಿಯಾಗಿದ್ದವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಆಧಾರ ರಹಿತವಾಗಿ ಆರೋಪ ಮಾಡುವ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವಂತೆ ರಾಜಕೀಯ ನಿವೃತ್ತರಾಗುವುದು ಒಳಿತು ಎಂದು ಟೀಕಿಸಿದರು.

ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಎಲ್ಲ ಪಕ್ಷಗಳೂ ಖರ್ಚು ಮಾಡುತ್ತವೆ. ಆದರೆ, ಚುನಾವಣೆಗೆ ಅಧಿಕವಾಗಿ ದೇಣಿಗೆ ವಸೂಲಿ ಮಾಡಲಾಗುತ್ತಿದೆ ಎಂದು ಹೇಳುತ್ತಿರುವುದರಲ್ಲಿ ಹುರುಳಿಲ್ಲ ಎಂದು ಹೇಳಿದರು.   ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಒಂದು ಸಾವಿರ ಕೋಟಿ ನೀಡುವ ಅಗತ್ಯವಿಲ್ಲ. ಕರ್ನಾಟಕದಿಂದ ದುಡ್ಡು ಪಡೆಯುವ ಅವಶ್ಯಕತೆ ಹೈಕಮಾಂಡ್‍ಗೂ ಇಲ್ಲ. ಅಷ್ಟು ದುಡ್ಡು ಕೊಡುವ ಸಾಧ್ಯತೆಯೂ ಕರ್ನಾಟಕದಲ್ಲಿಲ್ಲ ಎಂದು ವಿವರಿಸಿದ್ದಾರೆ.  ಯಡಿಯೂರಪ್ಪನವರು ಆದಾಯ ತೆರಿಗೆ ಮತ್ತು ಕೇಂದ್ರ ಜಾರಿ ನಿರ್ದೇಶನಾಲಯದ ಮಾಹಿತಿ ಆಧರಿಸಿ ಹೇಳಿಕೆ ನೀಡುತ್ತಿದ್ದೇವೆ ಎಂದಿದ್ದು, ಅದು ಕೂಡ ಅನುಮಾನಾಸ್ಪದ ಎಂದು ಹೇಳಿದರು. ಅವರಿಗೆ ಹೇಗೆ ದಾಖಲೆ ಸಿಕ್ಕಿತು ಎಂಬುದು ಪ್ರಶ್ನೆಯಾಗಿದೆ. ಇಂತಹ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin