ಕುರಿಯನ್ನು ತಿಂದ ಚಿರತೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಫೆ.12– ಕುರಿಯನ್ನು ತಿಂದ ಚಿರತೆಯು ಸಾವನ್ನಪ್ಪಿರುವ ಘಟನೆ ನಾಗಮಂಗಲ ತಾಲೂಕು ದೇವಲಾಪುರ ಹೋಬಳಿ ವ್ಯಾಪ್ತಿಯಲ್ಲಿ ನಡೆದಿದೆ. ಹೋಬಳಿಯ ಕೋಟೆ ಬೆಟ್ಟದ ನಲಕುಂದಿ ರಸ್ತೆಯ ಪಕ್ಕದಲ್ಲಿದ್ದ ಪೊದೆಯೊಂದರ ಬಳಿ ಚಿರತೆಯೊಂದು ಮೃತಪಟ್ಟಿರುವುದನ್ನು ಸಾರ್ವಜನಿಕರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.  ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಪರಿಶೀಲಿಸಿದಾಗ ಚಿರತೆಯು ಸತ್ತು ಬಿದ್ದಿದ್ದ ಸ್ವಲ್ಪ ದೂರದಲ್ಲೇ ಕುರಿಯ ಕಳೇಬರ ಪತ್ತೆಯಾಗಿದೆ. ಕುರಿಯ ಕಳೇಬರ ಪರಿಶೀಲಿಸಿದ ಅಧಿಕಾರಿಗಳು ವಿಷಯುಕ್ತ ಸೊಪ್ಪನ್ನು ಸೇವಿಸಿದ ಕುರಿಯನ್ನು ತಿಂದು ಚಿರತೆ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin