ಕೈಲಾಶ್ ಸತ್ಯಾರ್ಥಿ ನೊಬೆಲ್ ಪ್ರಶಸ್ತಿ ಕದ್ದಿದ್ದ ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Kailash-Satyarthi

ನವದೆಹಲಿ: ಫೆ.12-ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರ ಮನೆಯಲ್ಲಿ ಕಳ್ಳತನ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದು, ನೊಬೆಲ್ ಸ್ಮರಣಿಕೆ, ಪ್ರಶಸ್ತಿ ಪತ್ರ, ಮತ್ತು ಚಿನ್ನದ ಅಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.   ರಜನ್, ಸುನೀಲ್ ಹಾಗೂ ವಿನೋದ್ ಬಂಧಿತ ಆರೋಪಿಗಳು.   ವಿದೇಶದಲ್ಲಿ ಕೈಲಾಸ್ ಸತ್ಯಾರ್ಥಿ ಪ್ರವಾಸದಲ್ಲಿದ್ದಾಗ ಆರೋಪಿಗಳು ಫೆ. 7 ರಂದು ದಕ್ಷಿಣ ದೆಹಲಿಯ ಕಲ್ಕಕಾಜಿಯಲ್ಲಿರುವ ಮನೆಯ ಬಾಗಿಲು ಮುರಿದು ನೊಬೆಲ್ ಪ್ರಶಸ್ತಿ ಪತ್ರ ಹಾಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದರು.   ಬಂಧಿತರಿಂದ ಕಳವುವಾಗಿದ್ದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಅವರು ಪಾಕಿಸ್ತಾನ ಶಿಕ್ಷಣ ಹಕ್ಕು ಹೋರಾಟಗಾರ್ತಿ ಮಲಾಲಾ ಯೂಸಫ್ ಜೊತೆ 2014ರಲ್ಲಿ ವಿಶ್ವಸಂಸ್ಥೆ ನೊಬೆಲ್ ಶಾಂತಿ ಪ್ರಶಸ್ತಿ ಹಂಚಿಕೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin