ಕ್ಷಿಪಣಿ ಉಡಾಯಿಸಿ ಡೊನಾಲ್ಡ್ ಟ್ರಂಪ್‍ರನ್ನು ಕೆಣಕಿದ ಉತ್ತರ ಕೊರಿಯಾ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ಸಿಯೋಲ್, ಫೆ.12-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನು ಕೆಣಕುವ ಉದ್ದೇಶದಿಂದ ಕಲಹಪ್ರಿಯ ದೇಶ ಉತ್ತರ ಕೊರಿಯಾ ಖಡಾಂತರ ಕ್ಷಿಪಣಿಯನ್ನು ಪ್ರಯೋಗಿಸಿದೆ. ಇರಾನ್ ಈಗಾಗಲೇ ಕ್ಷಿಪಣಿ ಪರೀಕ್ಷೆ ನಡೆಸಿ ಅಮೆರಿಕ ಕೆಂಗಣ್ಣಿಗೆ ಗುರಿಯಾಗಿರುವಾಗಲೇ ಹೊಸ ಅಧ್ಯಕ್ಷರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವ ಉದ್ದೇಶದಿಂದ ಉತ್ತರ ಕೊರಿಯಾ ಈ ದುಸ್ಸಾಹಸಕ್ಕೆ ಕೈಹಾಕಿದಂತಿದೆ.   ಉತ್ತರ ಪಯೊನ್‍ಗನ್ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿರುವ ಬಾಂಗ್‍ಯೋನ್ ವಾಯು ನೆಲೆಯಿಂದ ಇಂದು ಬೆಳಿಗ್ಗೆ 7.55ರಲ್ಲಿ ಕ್ಷಿಫಣಿಯನ್ನು ಹಾರಿಸಲಾಯಿತು.
ಇದು ಜಪಾನ್ ಸಮುದ್ರ ಪೂರ್ವ ಭಾಗದಲ್ಲಿ ಬೀಳುವುದಕ್ಕೂ ಮುನ್ನ ಸುಮಾರು 500 ಕಿ.ಮೀ. ದೂರ ಹಾರಿತು ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ತನ್ನ ಅಣ್ವಸ್ತ್ರ ಮತ್ತು ಕ್ಷಿಪಣಿ ಸಾಮಥ್ರ್ಯಗಳ ಬಗ್ಗೆ ಕೊಚ್ಚಿಕೊಳ್ಳುವ ಮೂಲಕ ಜಗತ್ತಿನ ಗಮನಸೆಳೆಯಲು ಉತ್ತರ ಕೊರಿಯಾ ಈ ಉದ್ದಟನತನ ಪ್ರದರ್ಶಿಸಿದೆ ಎಂಧು ದಕ್ಷಿಣ ಕೊರಿಯಾ ಆರೋಪಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin