ತಮಿಳುನಾಡು ಹೈಡ್ರಾಮಾ (Live)

ಈ ಸುದ್ದಿಯನ್ನು ಶೇರ್ ಮಾಡಿ

Sasikala-vs-Selvam

Live Updates :

>  ಸೆಲ್ವಂ ಬೆಂಬಲಿಸಿದ ಸಂಸದನ ಮೇಲೆ ‘ಉಚ್ಛಾಟನೆ’ ಅಸ್ತ್ರ ಪ್ರಯೋಗಿಸಿದ ಶಶಿಕಲಾ

ಚೆನ್ನೈ, ಫೆ.12-ತಮಿಳುನಾಡು ಉಸ್ತುವಾರಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ಸೂಚಿಸಿದ್ದಕ್ಕಾಗಿ ವಿಲ್ಲುಪುರಂ ಸಂಸದ ಲಕ್ಷಣನನ್ ಅವರನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಪಕ್ಷದಿಂದ ಉಚ್ಛಾಟಿಸಿದ್ದಾರೆ. ಇದರೊಂದಿಗೆ ಉಭಯ ಬಣಗಳ ಕಿತ್ತಾಟ ತಾರಕ್ಕೇರಿದಂತಾಗಿದೆ.   ತಮ್ಮ ವಿರುದ್ಧ ಬಂಡಾಯವೆದ್ದಿರುವ ಸೆಲ್ವಂ ಪರ ಬೆಂಬಲ ಹೆಚ್ಚಾಗುತ್ತಿರುವ ಬೆನ್ನಲ್ಲೇ ಆ ಬಣಕ್ಕೆ ಜಿಗಿಯುತ್ತಿರುವ ಸಂಸದರು ಮತ್ತು ಶಾಸಕರಿಗೆ ಎಚ್ಚರಿಕೆ ನೀಡಲು ಚಿನ್ನಮ್ಮ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಇದೆ ವೇಳೆ ಪಕ್ಷದ ಜಿಲ್ಲಾ ಘಟಕಗಳ ಮುಖ್ಯಸ್ಥರು ಕೂಡ ಸೆಲ್ವಂ ಪರವಾಗಿ ನಿಂತಿದ್ದಾರೆ.


 

>  ಜಯಲಲಿತಾ ಅಣ್ಣನ ಮಗಳು ದೀಪಾ ಹೊಸ ಪಕ್ಷಕ್ಕೆ ‘ಅಮ್ಮಾ ಡಿಎಂಕೆ’ ಹೆಸರು


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin