ಬೆಂಗಳೂರಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

dgsdgasdfgfg
ಬೆಂಗಳೂರು, ಫೆ.12- ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಮತ್ತು ಘಾನಾದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಘಾನಾದ ಎರ್ನೆಸ್ಟ್ (38), ನೈಜೀರಿಯಾದ ಫೆರ್ನಾಂಡ್ ಉಬ್ಹ್ (36) ಮತ್ತು ಮದು ಅಬುಕ್ವು ಉಬಾಕ (28) ಬಂತರು.  ಅಗರ ಮುಖ್ಯರಸ್ತೆಯ ರೈಲ್ವೆಗೇಟ್ ಬಳಿ ಕೊಕೇನ್ ಇಟ್ಟುಕೊಂಡು ಮಾರಲು ಯತ್ನಿಸುತ್ತಿದ್ದ ಎರ್ನೆಸ್ಟೆ ಮತ್ತು ಫೆರ್ನಾಂಡ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಇವರಿಂದ 20 ಗ್ರಾಂ ಕೊಕೇನ್, 3 ಮೊಬೈಲ್, ತೂಕದ ಯಂತ್ರ, ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದು ಅಬುಕ್ವುನನ್ನು ಬಂಧಿಸಿ 5 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ದ್ವಿಚಕ್ರ ವಾಹನ, 2 ಲ್ಯಾಪ್‍ಟಾಪ್, ಟ್ಯಾಬ್, 2 ಮೊಬೈಲ್, ಒಡಾಂಗಲ್ ಮತ್ತು ಹಣ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ವ್ಯಾಪಾರ ವೀಸಾದಡಿ ದೇಶಕ್ಕೆ ಭೇಟಿ ನೀಡಿದ್ದು , ವೀಸಾ ನಿಯಮಗಳನ್ನು ಪಾಲಿಸದೆ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡಿ ವಿಲಾಸಿ ಜೀವನ ಸಾಗಿಸುವ ದಂಧೆಯಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಸಿಸಿಬಿಯ ಎಸಿಪಿ ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಕೆ.ಎನ್.ಯಶವಂತ್‍ಕುಮಾರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin