ಬೆಂಗಳೂರಲ್ಲಿ ಸಂಭವಿಸಿದ 3 ಪ್ರತ್ಯೇಕ ಅಪಘಾತಗಳಲ್ಲಿ ಮೂವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--Blood--01

ಬೆಂಗಳೂರು, ಫೆ.12- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಪಾದಚಾರಿ ಸಾವು:
ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು-ಬಳ್ಳಾರಿ ರಸ್ತೆಯ ಶ್ರೀ ಕೃಷ್ಣಗ್ಯಾಂಡ್ ಹೋಟೆಲ್ ಬಳಿ ಸಂಭವಿಸಿದೆ.
ಕನ್ನಮಂಗಲ ಗೇಟ್ ಬಳಿಯ ಶ್ರೀ ಕೃಷ್ಣ ಗ್ಯಾಂಡ್ ಹೋಟೆಲ್ ಸಮೀಪ ರಾತ್ರಿ 10.30ರಲ್ಲಿ ರಸ್ತೆ ದಾಟುತ್ತಿದ್ದ ಸುಮಾರು 20-28 ವರ್ಷದ ವ್ಯಕ್ತಿಗೆ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ.  ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಪಾದಚಾರಿ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಮೃತನ ಗುರುತು ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಇಡಲಾಗಿದೆ.

ಬೈಕ್‍ಗೆ ಲಾರಿ ಡಿಕ್ಕಿ: ಸವಾರ ಸಾವು 

ಬೈಕ್‍ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು-ಬಳ್ಳಾರಿ ರಸ್ತೆಯ ಎಸ್‍ಪಿ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ.
ವಿಜಯಪುರ ನಿವಾಸಿ ಮನು (22) ಮೃತಪಟ್ಟ ಸವಾರ. ಗಾರೆ ಕೆಲಸ ಮಾಡುವ ಈತ ನಿನ್ನೆ ಮಧ್ಯಾಹ್ನ 3 ಗಂಟೆ ಸಮಾರಿನಲ್ಲಿ ಬೈಕ್‍ನಲ್ಲಿ ತೆರಳುವಾಗ ಲಾರಿ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಮನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.

ಬೈಕ್ ಸ್ಕಿಡ್ ಆಗಿ ಸವಾರ ಸಾವು:

ಅತಿ ವೇಗವಾಗಿ ಚಲಿಸಿದ ಬೈಕೊಂದು ತಿರುವಿನಲ್ಲಿ ಸ್ಕಿಡ್ ಆಗಿ ಬಿದ್ದು ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೈಚಾಪುರ ರಸ್ತೆಯಲ್ಲಿ ನಡೆದಿದೆ.  ಆರ್.ಟಿ.ನಗರದ ಮನೋರಾಯನಪಾಳ್ಯ ವಾಸಿ ನಾರಾಯಣಸ್ವಾಮಿ ಮೃತಪಟ್ಟ ನತದೃಷ್ಟ. ಡಿಸ್ಕವರಿ ಬೈಕ್‍ನಲ್ಲಿ ರಾತ್ರಿ 11 ಗಂಟೆ ವೇಳೆಯಲ್ಲಿ ಅತಿವೇಗವಾಗಿ ಹೋಗುವಾಗ ದೇವನಹಳ್ಳಿಯ ಬೈಚಾಪುರ ರಸ್ತೆಯಲ್ಲಿನ ಚರ್ಚ್ ಬಳಿ ತಿರುವಿನಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡ ಸವಾರ ಸಾವನ್ನಪ್ಪಿದ್ದಾನೆ.  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ ಠಾಣೆ ಪೆÇಲೀಸರು ಮೂರು ಪ್ರಕರಣಗಳನ್ನು  ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin