ಮೇವಿಗಾಗಿ 70 ಎಮ್ಮೆಗಳೊಂದಿಗೆ ಪ್ರತಿಭಟಿಸುತ್ತಿದ್ದ ರೈತನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Cheluru-Protest

ಗುಬ್ಬಿ, ಫೆ.12- ಮೇವಿಗಾಗಿ ಎಮ್ಮೆಗಳೊಂದಿಗೆ ಪ್ರತಿಭಟಿಸುತ್ತಿದ್ದ ರೈತ ಈಗ ಠಾಣೆಯಲ್ಲಿ ಬಂಧಿಯಾಗಿದ್ದಾನೆ. ಮೇವು ನೀಡದ ಹಿನ್ನಲೆಯಲ್ಲಿ ಎಮ್ಮೆಗಳೊಂದಿಗೆ ಪತ್ರಿಭಟನೆಗೆ ಮುಂದಾಗಿದ್ದ ಮಲ್ಲಿಕಾರ್ಜುನ್ ಎಂಬಾತನ ವಿರುದ್ದ ತಹಸೀಲ್ದಾರ್ ಎಸ್.ಎಲ್.ವಿಶ್ವನಾಥ್ ನೀಡಿದ ದೂರಿನ ಮೇರೆಗೆ ಚೇಳೂರು ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.   ತನ್ನ 70 ಎಮ್ಮೆಗಳನ್ನು ಚೇಳೂರು ಠಾಣೆ ಮುಂದೆ ತಂದು ಕಳೆದೆರಡು ದಿನದಿಂದ ಮೊಕ್ಕಂ ಹೂಡಿ ಪ್ರತಿಭಟಿಸುತ್ತಿದ್ದ ಮಲ್ಲಿಕಾರ್ಜುನ್ ಮೇವು ನೀಡಲಿಲ್ಲವೆಂದು ಅಧಿಕಾರಿಗಳನ್ನು ನಿಂದಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದ ಕಾರಣ ತಹಸೀಲ್ದಾರ್ ಚೇಳೂರು ಠಾಣೆಯಲ್ಲಿ ದೂರು ಸಲ್ಲಿಸಿದರು. ಕೂಡಲೇ ಮಲ್ಲಿಕಾರ್ಜುನ್ ಬಂಧಿಸಲಾಗಿದೆ.

ಕಮರ್ಷಿಯಲ್ ಫಾರಂಗಳ ರಾಸುಗಳಿಗೆ ಮೇವು ನೀಡುವಂತಿಲ್ಲ. ಕೃಷಿ ನಡೆಸದ ಮಲ್ಲಿಕಾರ್ಜುನ್ ರೈತನಾಗಿಲ್ಲ. ಪೆಟ್ರೋಲ್ ಬಂಕ್ ಕೂಡಾ ಹೊಂದಿದ್ದಾನೆ. ಹಾಲು ನೀಡುತ್ತಿರುವ ಎಮ್ಮೆಗಳನ್ನು ಫಾರಂನಲ್ಲಿ ಬಿಟ್ಟು ಹಾಲು ನೀಡದ ಎಮ್ಮೆಗಳನ್ನು ಮಾತ್ರ ಗೋಶಾಲೆಗೆ ತಂದು ಇಲ್ಲದ ಗೊಂದಲ ಸೃಷ್ಟಿಸಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಮಾಡಿದ್ದು, ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಧಿಕಾರಿಗಳಿಗೆ ಮಾನಸಿಕವಾಗಿ ನೋವು ಕೊಟ್ಟಿದ್ದ ಕಾರಣ ದೂರು ನೀಡಿರುವುದಾಗಿ ತಹಸೀಲ್ದಾರ್ ಎಸ್.ಎಲ್.ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin