ಕೈಗಾರಿಕೆಗಳ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ : ಜೇಟ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Make-In-Karnataka 0 1

ಬೆಂಗಳೂರು, ಫೆ.13– ಕರ್ನಾಟಕ ಕೈಗಾರಿಕೆಗಳ ಬಂಡವಾಳ ಹೂಡಿಕೆಯಲ್ಲಿ ಮುಂಚೂಣಿ ರಾಜ್ಯವಾಗಿದೆ. ಇಲ್ಲಿ ವಿಮಾನಯಾನ ಕ್ಷೇತ್ರ, ಐಟಿಬಿಟಿ ಮತ್ತಿತರ ಕ್ಷೇತ್ರಗಳಿಗೂ ಹೆಚ್ಚು ಬಂಡವಾಳ ಹರಿದು ಬರುವಂತೆ ರಕ್ಷಣಾ ಕ್ಷೇತ್ರದ ಉತ್ಪಾದನೆಗಳಿಗೂ ಹೆಚ್ಚು ಬಂಡವಾಳ ಹೂಡಿಕೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‍ಜೇಟ್ಲಿ ಹೇಳಿದರು.  ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಮೇಕ್ ಇನ್ ಕರ್ನಾಟಕ ಎರಡು ದಿನಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಶಿಕ್ಷಣ ಕ್ಷೇತ್ರದ ಹಬ್ ಆಗಿದ್ದು, ಇಲ್ಲಿ ಸಾವಿರಾರು ಶಿಕ್ಷಣ ಸಂಸ್ಥೆಗಳಿವೆ, ಸಂಶೋಧನಾ ಕೇಂದ್ರಗಳಿವೆ, ಇಲ್ಲಿ ಅತ್ಯಂತ ಗುಣಮಟ್ಟದ ಮಾನವ ಸಂಪನ್ಮೂಲ ಸೃಷ್ಟಿಯಾಗುತ್ತಿದೆ. ಈ ಎಲ್ಲಾ ಸಾಧನೆಗಳ ಜತೆಗೆ ಇನ್ನು ಮುಂದೆ ರಕ್ಷಣಾ ಕ್ಷೇತ್ರದ ಹೂಡಿಕೆಯೂ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಜಿಎಸ್‍ಟಿ ತೆರಿಗೆ ಪದ್ಧತಿ ಜಾರಿಯ ನಂತರ ಮಹತ್ವದ ಬದಾಲವಣೆಗಳಾಗಲಿವೆ. ಸರಕು ಸಾಗಾಣಿಕೆಯ ವ್ಯವಸ್ಥೆ ಸುಲಭವಾಗಲಿವೆ. ವಿವಿಧ ಹಂತದ ತೆರಿಗೆಗಳು ಕಡಿಮೆಯಾಗಿ ಉತ್ಪಾದನಾ ವಲಯ ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ. ತೆರಿಗೆ ಪದ್ದತಿ ಸರಳೀಕರಣಗೊಳ್ಳುವುದರಿಂದ ತೆರಿಗೆ ವಂಚನೆಯ ಪ್ರಮಾಣವೂ ಕಡಿಮೆಯಾಗಲಿದೆ.  ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಕ್ಕೆ ತಮ್ಮ ಬಜೆಟ್‍ನಲ್ಲಿ 3.96ಲಕ್ಷ ಕೋಟಿ ಒದಗಿಸಲಾಗಿದ್ದು, ಸಾಮಾಜಿಕ ಕ್ಷೇತ್ರದ ಅಭಿವೃದ್ಧಿಯೂ ಆದತ್ಯೆ ನೀಡಲಾಗಿದೆ. ದೇಶದ ಅಭಿವೃದ್ಧಿ ದರದ ಪ್ರಮಾಣ ಶೇ.7.5ರಷ್ಟಿದ್ದು, ಅದನ್ನು ಮತ್ತಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin