ಬಾಂಗ್ಲಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ 208 ರನ್ ಗಳ ಜಯ

ಈ ಸುದ್ದಿಯನ್ನು ಶೇರ್ ಮಾಡಿ

India--01

ಹೈದರಾಬಾದ್. ಫೆ.13 : ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ 208 ರನ್ ಗಳ ಅಂತರದಿಂದ ಭಾರತ ಗೆಲುವು ಸಾಧಿಸಿದೆ.  ದೆ. 459 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾದೇಶ ದ್ವಿತೀಯ ಇನ್ನಿಂಗ್ಸ್ ನಲ್ಲಿ 250 ರನ್ ಗಳಿಗೆ ಸರ್ವಪತನ ಕಂಡಿತು. ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಟೀಂ ಇಂಡಿಯ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 687 ರನ್ ಸಿಡಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ನಂತರ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ 388 ರನ್ ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ 299 ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಬಾಂಗ್ಲಾದೇಶಕ್ಕೆ 459 ರನ್ ಗಳ ಟಾರ್ಗೆಟ್ ನೀಡಿತು.  ನಾಲ್ಕನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ 3 ವಿಕೆಟ್ ನಷ್ಟಕ್ಕೆ 103 ರನ್ ಪೇರಿಸಿತು. ಐದನೇ ದಿನದಾಟ ಆರಂಭಿಸಿದ ಬಾಂಗ್ಲಾದೇಶಕ್ಕೆ ಅರಂಭಿಕ ಆಘಾತ ನೀಡಿದ್ದು ಇಶಾಂತ್ ಶರ್ಮಾ. ಮಹಮದ್ದುಲ್ಲಾ ಮತ್ತು ಶಬ್ಬೀರ್ ರೆಹಮಾನ್ ವಿಕೆಟ್ ಕಿತ್ತು ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಅಂತಿಮವಾಗಿ ಆರ್ ಅಶ್ವಿನ್ ಟಸ್ಕಿನ್ ಅಹಮದ್ ರನ್ನು ಎಲ್ ಬಿ ಬಲೆಗೆ ಬೀಳಿಸುವ ಮೂಲಕ ಬಾಂಗ್ಲಾದೇಶ ಸರ್ವಪತನ ಕಂಡಿತು.

ಸಂಕ್ಷಿಪ್ತ ಸ್ಕೋರ್  : 

ಭಾರತ : ಮೊದಲ ಇನ್ನಿಂಗ್ಸ್ 687/6 ಡಿಕ್ಲೇರ್
ಬಾಂಗ್ಲಾದೇಶ : ಮೊದಲ ಇನ್ನಿಂಗ್ಸ್ 388ಕ್ಕೆ ಆಲೌಟ್
ಭಾರತ : ದ್ವಿತೀಯ ಇನ್ನಿಂಗ್ಸ್ 159ಕ್ಕೆ ಡಿಕ್ಲೇರ್
ಬಾಂಗ್ಲಾದೇಶ : ದ್ವಿತೀಯ ಇನ್ನಿಂಗ್ಸ್ 250ಕ್ಕೆ ಆಲೌಟ್

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin