ಬೈಕ್‍ಗೆ ಕಾರು ಡಿಕ್ಕಿ ಹೊಡೆದು ಯೋಧ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

yodha

ಮೈಸೂರು,ಫೆ.13-  ಬೈಕ್‍ಗೆ ಕಾರು ಡಿಕ್ಕಿ ಹೊಡೆದು ಯೋಧ ಮೃತಪಟ್ಟಿರುವ ಘಟನೆ ವಿವಿಪುರಂ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಎಂಶ್ರೀ ನಗರದ ನಿವಾಸಿ ಮಹೇಶ್(26) ಮೃತಪಟ್ಟ ಯೋಧ. ರಾಜಸ್ಥಾನದ ಭಾರತೀಯ ವಾಯುಸೇನೆಯ ಬೆಟಾಲಿಯನ್‍ನಲ್ಲಿ ಯೋಧನಾಗಿ ಮಹೇಶ್ ಸೇವೆ ಸಲ್ಲಿಸುತ್ತಿದ್ದರು. ಕಳೆದ ಏಪ್ರಿಲ್‍ನಲ್ಲಿ ಮಹೇಶ್ ವಿವಾಹವಾಗಿದ್ದು , ವಿವಾಹದ ನೋಂದಣಿ ಮಾಡಿಸಲೆಂದು ರಜೆ ಹಾಕಿ ಮೈಸೂರಿಗೆ ಬಂದಿದ್ದರು. ಪಲ್ಸರ್ ಬೈಕ್‍ನಲ್ಲಿ ಮಹೇಶ್ ತೆರಳುತ್ತಿದ್ದಾಗ,ಕೆಆರ್‍ಎಸ್ ರಸ್ತೆಯ ಜೆಂಕ್ಷನ್‍ನಿಂದ ಕೊಲಂಬಿಯಾ ಏಷ್ಯಾ ಕಡೆಗೆ ತೆರಳುವಾಗ ಬೈಕ್‍ಗೆ ಕಾರು ಡಿಕ್ಕಿ ಹೊಡೆದಿದೆ. ತಕ್ಷಣ ಕಾರು ಚಾಲಕ ಮಹೇಶ್‍ನನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ವಿವಿಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin