BAFTAದಲ್ಲೂ ಲಾಲಾ ಲ್ಯಾಂಡ್ ಪ್ರಾಬಲ್ಯ, ದೇವ್ ಪಟೇಲ್‍ ಉತ್ತಮ ಪೋಷಕ ನಟ

ಈ ಸುದ್ದಿಯನ್ನು ಶೇರ್ ಮಾಡಿ

Dev-Patel---01

ಲಂಡನ್, ಫೆ.13– ಪ್ರತಿಭಾವಂತ ಚಿತ್ರ ನಿರ್ಮಾತೃ ಡಾಮೀನ್ ಚಾಜೆಲ್ ನಿರ್ದೇಶನದ ಲಾ ಲಾ ಲ್ಯಾಂಡ್ ಸಿನಿಮಾದ ಪ್ರಶಸ್ತಿಗಳ ಗಳಿಕೆ ಸಾಮಥ್ರ್ಯ ಮುಂದುವರಿದಿದ್ದು. ಪ್ರತಿಷ್ಠಿತ 70ನೇ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್ (ಬಾಫ್ಟಾ) ಸಮಾರಂಭದಲ್ಲೂ ಅದು ಪುನರಾವರ್ತನೆಯಾಗಿದೆ. ಅತ್ಯುತ್ತಮ, ಉತ್ತಮ ನಿರ್ದೇಶನ ಮತ್ತು ಶ್ರೇಷ್ಠ ನಟಿ ಸೇರಿದಂತೆ ಐದು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಬ್ರಿಟನ್ ಮೂಲದ ಭಾರತೀಯ ನಟ ದೇವ್ ಪಟೇಲ್‍ಗೆ ಲಯನ್ ಸಿನಿಮಾಕ್ಕಾಗಿ ಶ್ರೇಷ್ಠ ಪೋಷಕ ನಟ ಪ್ರಶಸ್ತಿ ಲಭಿಸಿದೆ.   ಲಂಡನ್‍ನಲ್ಲಿ ನಿನ್ನೆ ನಡೆದ ವರ್ಣರಂಜಿತ ಅದ್ದೂರಿ ಸಮಾರಂಭದಲ್ಲಿ ಚಿತ್ರರಂಗದ ಸಾಧಕರಿಗೆ ಪ್ರಶಸ್ತಿಗಳನ್ನು ಕೊಡಮಾಡಲಾಯಿತು.

ಮ್ಯಾಂಚೆಸ್ಟರ್ ಬೈ ದಿ ಸೀ ಸಿನಿಮಾದ ಅದ್ಭುತ ನಟನೆಗಾಗಿ ಕ್ಯಾಸೆ ಆಫ್ಲೆಕ್ ಶ್ರೇಷ್ಠ ನಟ ಪ್ರಶಸ್ತಿ ಪಡೆದರೆ, ಲಾ ಲಾ ಲ್ಯಾಂಡ್‍ನ ಮನೋಜ್ಞ ಅಭಿನಯಕ್ಕಾಗಿ ಎಮ್ಮಾ ಸ್ಟೋನ್ ಶ್ರೇಷ್ಠ ನಟಿ ಪುರಸ್ಕಾರಕ್ಕೆ ಭಾಜನರಾದರು. ಫೆನ್ಸಸ್ ಚಿತ್ರಕ್ಕಾಗಿ ವಿಯೋಲಾ ಡೇವಿಸ್ ಶ್ರೇಷ್ಠ ಪೋಷಕ ನಟಿ ಗೌರವಕ್ಕೆ ಪಾತ್ರರಾದರು.   ಡಾಮೀನ್ ಮತ್ತು ಫೆನ್ಸಸ್ ಚಿತ್ರಕ್ಕಾಗಿ ನಿರ್ದೇಶಕ ಕೆನ್ನೆತ್ ಲೊನೆರ್‍ಗನ್ ಕ್ರಮವಾಗಿ ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಮೂಲ ಚಿತ್ರಕಥೆ ಪ್ರಶಸ್ತಿ ಗಳಿಸಿದರು.

ಈಗಾಗಲೇ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲೂ 11 ಪುರಸ್ಕಾರಗಳನ್ನು ಪಡೆದಿರುವ ಲಾ ಲಾ ಲ್ಯಾಂಡ್, ಬಾಫ್ಟಾದಲ್ಲೂ ಪ್ರಾಬಲ್ಯ ಮುಂದುವರಿಸಿದ್ದು, ಫೆ.26ರಂದು ನಡೆಯುವ ಆಸ್ಕರ್‍ನಲ್ಲೂ ಗರಿಷ್ಠ ಸಂಖ್ಯೆಯ ಪ್ರಶಸ್ತಿಗಳನ್ನು ಬಾಚಿಕೊಳ್ಳಲು ಸಜ್ಜಾಗಿದೆ. ಈ ಸಿನಿಮಾ ಈಗಾಗಲೇ 14 ಆಸ್ಕರ್ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin