ಕ್ರೀಡಾ ನಿಯಮಗಳಿಗೆ ತಲೆ ಬಾಗಿ ನಡೆಯಬೇಕು : ಜಿಪಂ ಉಪಾಧ್ಯಕ್ಷ  ಪ್ರಭುಗೌಡ ದೇಸಾಯಿ 

ಈ ಸುದ್ದಿಯನ್ನು ಶೇರ್ ಮಾಡಿ

8ಮುದ್ದೇಬಿಹಾಳ,ಫೆ.14- ಕ್ರೀಡೆ ಎಂದರೆ ಸೋಲು ಗೆಲವು ಸಹಜ. ಆದರೆ ಕ್ರೀಡೆಯಲ್ಲಿ ಗೆಲುವು ಸಾಧಿಸುವುದಕ್ಕಿಂತ ಮೊದಲು ಕ್ರೀಡಾ ನಿಯಮಗಳಿಗೆ ತಲೆ ಬಾಗಿ ನಡೆಯಬೇಕು ಎಂದು ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.ಪಟ್ಟಣದ ಶಾ ಎಸ್‍ಪಿ ಓಸ್ವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಅವರ ಸಂಯುಕ್ತಾಶ್ರಯದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಅಂತರ ಮಹಾವಿದ್ಯಾಲಯಗಳ ಪುರುಷರ ತೃತೀಯ ವಿಜಯಪುರದ ವ್ಹಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿ ಕ್ರೀಡೆಯಲ್ಲಿ ಪ್ರಾಮಾಣಿಕತೆ, ನಿಷ್ಠೆ ಇದ್ದರೆ ಸರ್ವಕಾಲದಲ್ಲೂ ಮುನ್ನಡೆ ಸಾಧಿಸಬಹುದು ಎಂದು ಹೇಳಿದರು.ಡಾ. ಎನ್.ಬಿ. ಹೊಸಮನಿ ಮಾತನಾಡಿ ರಾಜ್ಯ ಸರ್ಕಾರದಿಂದ ಸ್ಥಳೀಯ ಕಾಲೇಜಿನಲ್ಲಿ 12 ಲಕ್ಷ ರೂ. ವೆಚ್ಚದ ಜಿಮ್ ಇದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡು ಉತ್ತಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಯುವ ಸಂಘಗಳ ಒಕ್ಕೂಟದ ಮುಖಂಡ ಪುಂಡಲೀಕ ಮುರಾಳ, ರವಿ ಗೋಲಾ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಂ. ಲಕ್ಷ್ಮೀಶ ಮಾತನಾಡಿದರು.  ಸ.ಕಾ.ನಿ ಅಭಿಯಂತರ ಬಿ.ಎಸ್. ಪ್ಯಾಟಿಗೌಡರ, ಮುಖಂಡರಾದ ನಿಲೇಶ ಬೇನಾಳ, ಬಿ.ಎಚ್. ಹಾಲಣ್ಣವರ ದೊರೆ, ಜೀತೇಂದ್ರ ಓಸ್ವಾಲ, ಉಪನ್ಯಾಸಕರಾದ ಬಸವರಾಜ ಅಸ್ಕಿ, ಶಿವಾನಂದ ಕೊಣ್ಣೂರ, ರವಿ ನಾಲತವಾಡ ಮತ್ತಿತರರು ಇದ್ದರು. ಬಳಿಕ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮುದ್ದೇಬಿಹಾಳ ಹಾಗೂ ನಿಡಗುಂದಿ ತಂಡಗಳ ಮಧ್ಯೆದ ಅಭ್ಯಾಸ ಪಂದ್ಯಕ್ಕೆ ವಾಲಿಬಾಲ್ ಸರ್ವ್ ಮಾಡುವ ಮೂಲಕ ಚಾಲನೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin