ಗ್ರಾಮದವರನ್ನೇ ಅಂಗನವಾಡಿಗೆ ನೇಮಿಸಲು ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

KGF

ಕೆಜಿಎಫ್,ಫೆ.14-ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಬೇರೆ ಗ್ರಾಮದ ವ್ಯಕ್ತಿಗಳನ್ನು ನೇಮಕಗೊಂಡಿರುವುದನ್ನು ವಿರೋಧಿಸಿ ತಿರುಮಲಾಹಳ್ಳಿ ಗ್ರಾಮಸ್ಥರು ಇಂದು ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟಿಸಿದರು. ಬೇತಮಂಗಲ ಶಿಶು ಅಭಿವೃದ್ಧಿ ಅಧಿಕಾರಿಗಳು, ಕಾನೂನು ಬಾಹಿರವಾಗಿ ವರ್ತಿಸುತ್ತಿದ್ದಾರೆ. ತಿರುಮಲಾಹಳ್ಳಿಯಲ್ಲಿ ಗ್ರಾಮಸ್ಥರು ಉಚಿತವಾಗಿ ಅಂಗನವಾಡಿ ಕೇಂದ್ರಕ್ಕೆ ಜಾಗ ಕೊಟ್ಟಿದ್ದಾರೆ. ಗ್ರಾಮದಲ್ಲಿ ವಿದ್ಯಾವಂತ ಬಡ ಕುಟುಂಬಕ್ಕೆ ಸೇರಿದ ಹೆಣ್ಣು ಮಕ್ಕಳು ಇದ್ದರೂ,ಬೇರೆ ಗ್ರಾಮದವರನ್ನು ನೇಮಕ ಮಾಡುವುದು ಸರಿಯಲ್ಲ ಎಂದರು. ಶಿಶು ಅಭಿವೃದ್ಧಿ ಅಧಿಕಾರಿಗಳ ಈ ಕ್ರಮದ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಕೂಡಲೇ ಬೇರೆ ಗ್ರಾಮದ ಅಂಗನವಾಡಿ ಕೇಂದ್ರದಿಂದ ವರ್ಗಾವಣೆಯಾಗಿ ಬಂದಿರುವ ಕಾರ್ಯಕರ್ತೆಯನ್ನು ವಾಪಸ್ ಕರೆಸಿಕೊಂಡು ಗ್ರಾಮಸ್ಥರಿಗೆ ಉದ್ಯೋಗ ಕೊಡಬೇಕು ಎಂದು ಆಗ್ರಹಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin