ದಾಖಲೆ ಸೃಷ್ಟಿಸಿದ 250 ಆನೆಗಳ ಪಥಸಂಚಲನ

ಈ ಸುದ್ದಿಯನ್ನು ಶೇರ್ ಮಾಡಿ
ದಾಖಲೆ ಸೃಷ್ಟಿಸಿದ 250 ಆನೆಗಳ ಪಥಸಂಚಲನ ಥೈಲೆಂಡ್‍ನ ಈಶಾನ್ಯ ಪ್ರಾಂತ್ಯ ಸುರಿನ್‍ನಲ್ಲಿ 250 ಆನೆಗಳನ್ನು ಒಳಗೊಂಡ ಪಥಸಂಚಲನವೊಂದು ಏಷ್ಯಾ ಬುಕ್ ಆಫ್ ರೆಕಾಡ್ರ್ಸ್ ಪ್ರವೇಶಿಸಿದೆ. ಈ ಪೆರೇಡ್ `ಥೈಲೆಂಡ್ ಮತ್ತು ಏಷ್ಯಾದಲ್ಲಿ ಬೃಹತ್ ಆನೆ ಪಥಸಂಚಲನ ಮತ್ತು ಆಹಾರ ಪೂರೈಕೆ'ಗಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಗಜಗಳ ಬೃಹತ್ ಪಥಸಂಚಲನವನ್ನು ಸುರಿನ್ ಎಲಿಫೆಂಟ್ ರೌಂಡ್-ಅಪ್ ಎಂದು ಸಹ ಕರೆಯುತ್ತಾರೆ. ಈ ಪೆರೇಡ್ ಥೈಲೆಂಡ್‍ನ ಈಶಾನ್ಯ ಪ್ರಾಂತ್ಯದಲ್ಲಿ 1955ರಿಂದಲೂ ಪ್ರತಿವರ್ಷ ನಡೆಯುತ್ತಾ ಬರುತ್ತಿದೆ. ಇಲ್ಲಿಗೆ ಪ್ರತಿ ವರ್ಷ 200ಕ್ಕೂ ಹೆಚ್ಚು ಗಜಗಳು ಮತ್ತು ಅವುಗಳ ಮಾವುತರು ಆಗಮಿಸುತ್ತಾರೆ.  ಅಧಿಕ ಸಂಖ್ಯೆಯ ಆನೆಗಳ ಒಂದೆಡೆ ಜಮಾಯಿಸಿ ಒಟ್ಟಿಗೆ ಪಥ ಸಂಚಲನ ನಡೆಸಿದ್ದಕ್ಕಾಗಿ ಏಷ್ಯಾ ದಾಖಲೆ ಸೃಷ್ಟಿಯಾಗಿದೆ.  250 ಗಜಗಳು ಈ ದಾಖಲೆಯನ್ನು ನಿರ್ಮಿಸಿವೆ ಎಂದು ಏಷ್ಯಾ ಬುಕ್ ಆಫ್ ರೆಕಾಡ್ರ್ಸ್‍ನ ಮುಖ್ಯ ಸಂಪಾದಕ ಬಿಸ್ವರೂಪ್ ರಾಯ್ ಚೌಧರಿ ಖಚಿತಪಡಿಸಿದ್ದಾರೆ. ಥೈಲೆಂಡ್ ಮತ್ತು ಏಷ್ಯಾದಲ್ಲಿ ಬೃಹತ್ ಆನೆ ಪಥಸಂಚಲನ ಮತ್ತು ಆಹಾರ ಪೂರೈಕೆ ವಿಭಾಗದಲ್ಲಿ ಈ ಹಿಂದೆ ಇಂಥ ಯಾವುದೇ ದಾಖಲೆಗಳು ನಿರ್ಮಾಣವಾಗಿಲ್ಲ. ಆದರೆ, 2013ರಲ್ಲಿ ಇದೇ ಸುರಿನ್ ಪ್ರಾಂತ್ಯದಲ್ಲಿ ಪಥಸಂಚಲನದ ವೇಳೆ 50 ಟನ್‍ಗಳಷ್ಟು ಆಹಾರವನ್ನು ತಿಂದು 269 ಏಷ್ಯಾ ಆನೆಗಳು ಲಾರ್ಜೆಸ್ಟ್ ಎಲಿಫೆಂಟ್ ಬಫೆಗಾಗಿ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದವು. ಸುರಿನ್‍ನಲ್ಲಿ ನಡೆದ ಈ ಗಜ ಪಥಸಂಚಲನದ ವೇಳೆ ಪ್ರಾಂತ್ಯದ ಒಂದು ರಸ್ತೆಯುದ್ದಕ್ಕೂ 400 ಉದ್ದದ ಮೇಜಿನ ಮೇಲೆ ವಿವಿಧ ಹಣ್ಣುಗಳನ್ನು ಒಳಗೊಂಡ 67 ಟನ್‍ಗಳಷ್ಟು ಆಹಾರವನ್ನು ಆನೆಗಳಿಗೆ ನೀಡಲಾಗಿತ್ತು.
ಥೈಲೆಂಡ್‍ನ ಈಶಾನ್ಯ ಪ್ರಾಂತ್ಯ ಸುರಿನ್‍ನಲ್ಲಿ 250 ಆನೆಗಳನ್ನು ಒಳಗೊಂಡ ಪಥಸಂಚಲನವೊಂದು ಏಷ್ಯಾ ಬುಕ್ ಆಫ್ ರೆಕಾಡ್ರ್ಸ್ ಪ್ರವೇಶಿಸಿದೆ. ಈ ಪೆರೇಡ್ `ಥೈಲೆಂಡ್ ಮತ್ತು ಏಷ್ಯಾದಲ್ಲಿ ಬೃಹತ್ ಆನೆ ಪಥಸಂಚಲನ ಮತ್ತು ಆಹಾರ ಪೂರೈಕೆ’ಗಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಗಜಗಳ ಬೃಹತ್ ಪಥಸಂಚಲನವನ್ನು ಸುರಿನ್ ಎಲಿಫೆಂಟ್ ರೌಂಡ್-ಅಪ್ ಎಂದು ಸಹ ಕರೆಯುತ್ತಾರೆ. ಈ ಪೆರೇಡ್ ಥೈಲೆಂಡ್‍ನ ಈಶಾನ್ಯ ಪ್ರಾಂತ್ಯದಲ್ಲಿ 1955ರಿಂದಲೂ ಪ್ರತಿವರ್ಷ ನಡೆಯುತ್ತಾ ಬರುತ್ತಿದೆ. ಇಲ್ಲಿಗೆ ಪ್ರತಿ ವರ್ಷ 200ಕ್ಕೂ ಹೆಚ್ಚು ಗಜಗಳು ಮತ್ತು ಅವುಗಳ ಮಾವುತರು ಆಗಮಿಸುತ್ತಾರೆ. ಅಧಿಕ ಸಂಖ್ಯೆಯ ಆನೆಗಳ ಒಂದೆಡೆ ಜಮಾಯಿಸಿ ಒಟ್ಟಿಗೆ ಪಥ ಸಂಚಲನ ನಡೆಸಿದ್ದಕ್ಕಾಗಿ ಏಷ್ಯಾ ದಾಖಲೆ ಸೃಷ್ಟಿಯಾಗಿದೆ.250 ಗಜಗಳು ಈ ದಾಖಲೆಯನ್ನು ನಿರ್ಮಿಸಿವೆ ಎಂದು ಏಷ್ಯಾ ಬುಕ್ ಆಫ್ ರೆಕಾಡ್ರ್ಸ್‍ನ ಮುಖ್ಯ ಸಂಪಾದಕ ಬಿಸ್ವರೂಪ್ ರಾಯ್ ಚೌಧರಿ ಖಚಿತಪಡಿಸಿದ್ದಾರೆ. ಥೈಲೆಂಡ್ ಮತ್ತು ಏಷ್ಯಾದಲ್ಲಿ ಬೃಹತ್ ಆನೆ ಪಥಸಂಚಲನ ಮತ್ತು ಆಹಾರ ಪೂರೈಕೆ ವಿಭಾಗದಲ್ಲಿ ಈ ಹಿಂದೆ ಇಂಥ ಯಾವುದೇ ದಾಖಲೆಗಳು ನಿರ್ಮಾಣವಾಗಿಲ್ಲ. ಆದರೆ, 2013ರಲ್ಲಿ ಇದೇ ಸುರಿನ್ ಪ್ರಾಂತ್ಯದಲ್ಲಿ ಪಥಸಂಚಲನದ ವೇಳೆ 50 ಟನ್‍ಗಳಷ್ಟು ಆಹಾರವನ್ನು ತಿಂದು 269 ಏಷ್ಯಾ ಆನೆಗಳು ಲಾರ್ಜೆಸ್ಟ್ ಎಲಿಫೆಂಟ್ ಬಫೆಗಾಗಿ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದವು. ಸುರಿನ್‍ನಲ್ಲಿ ನಡೆದ ಈ ಗಜ ಪಥಸಂಚಲನದ ವೇಳೆ ಪ್ರಾಂತ್ಯದ ಒಂದು ರಸ್ತೆಯುದ್ದಕ್ಕೂ 400 ಉದ್ದದ ಮೇಜಿನ ಮೇಲೆ ವಿವಿಧ ಹಣ್ಣುಗಳನ್ನು ಒಳಗೊಂಡ 67 ಟನ್‍ಗಳಷ್ಟು ಆಹಾರವನ್ನು ಆನೆಗಳಿಗೆ ನೀಡಲಾಗಿತ್ತು.
Facebook Comments

Sri Raghav

Admin