ಪ್ರೀತಿಯ ಸೆಲೆಯಲ್ಲಿ ಸಿಲುಕುವ ಮುನ್ನ ಇರಲಿ ಎಚ್ಚರ..!

ಈ ಸುದ್ದಿಯನ್ನು ಶೇರ್ ಮಾಡಿ

5
ಫೆಬ್ರವರಿ 14 ಪ್ರೇಮಿಗಳ ಪಾಲಿಗೆ ಒಂದು ಅಮೂಲ್ಯವಾದ ದಿನ. ಪ್ರೇಮಿಗಳ ದಿನ ಎಂದರೆ ಗಂಡು-ಹೆಣ್ಣು ಪರಸ್ಪರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ದಿನವೆಂದು ಆಚರಿಸಲಾಗುತ್ತಿದೆ.
ಹುಡುಗಿಯ ಮೇಲಿನ ತನ್ನ ಪ್ರೀತಿಯ ಅಭಿವ್ಯಕ್ತಿಗೆ ಈ ದಿನ ಪ್ರಶಸ್ತವಾದದ್ದು ಎಂದು ನಂಬಿರುವ ಯುವ ಜನರು ತಮ್ಮ ಪ್ರೇಮ ನಿವೇದನೆಯನ್ನು ಹುಡುಗಿ ಅಥವಾ ಹುಡುಗ ಸ್ವೀಕರಿಸಿದರೆ ಸಂತೋಷದಿಂದ ಹಿಗ್ಗುವ ಅವರು ಒಂದು ವೇಳೆ ನಿರಾಕರಿಸಿದರೆ ಎಂಬ ಸಾಕಷ್ಟು ನೋವು ಅನುಭವಿಸುತ್ತಾರೆ.ಹದಿ ಹರೆಯದ ವಯಸ್ಸಿನಲ್ಲಿ ಈ ಪ್ರೀತಿ ಎಂಬ ಬಲೆಯಲ್ಲಿ ಬಿದ್ದಿದ್ದ ಅದೆಷ್ಟೋ ಜನರು ತಮ್ಮ ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. ಪ್ರೀತಿಯೆಂಬುದು ಬರೀ ಆಕರ್ಷಣೆಯಲ್ಲ ಎಂಬುದನ್ನು ಅರಿಯಬೇಕಾದ ಯಂಗ್ ಜನರೇಷನ್ ಅದನ್ನು ಅರ್ಥೈಸಿಕೊಳ್ಳದೆ ಅಪಾರ್ಥಗಳ ಸುಳಿಗೆ ಸಿಲುಕಿದೆ.ತಂದೆ-ತಾಯಿ ತಮ್ಮ ಮಕ್ಕಳ ಮೇಲೆ ಯಾರ ಕೆಟ್ಟ ನೆರಳು ಬೀಳದಂತೆ ಎಷ್ಟೇ ಜಾಗ್ರತೆಯಿಂದ ಕಾಪಾಡಿದರೂ ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ ಎಂಬ ಪಾಷ ಸೆಳೆಯುತ್ತದೆ. ಆದರೆ ಅದು ಪ್ರೀತಿಯಲ್ಲ ಬರೀ ಆಕರ್ಷಣೆ ಎಂಬುದು ಮನವರಿಕೆಯಾಗಬೇಕಿದೆ.

ಇಂದಿನ ದಿನಗಳಲ್ಲಿ ಬಹಳಷ್ಟು ಮಂದಿ ಇಂತಹ ಆಕರ್ಷಣೆಗೆ ಒಳಗಾಗಿ ತಮ್ಮ ಜೀವನದ ಮುಂದಿನ ಗುರಿಯನ್ನು ಮರೆತು ಪ್ರೀತಿ.. ಪ್ರೇಮವೆಂದು ಸುತ್ತಾಡುತ್ತಾರೆ. ಮನಸ್ಸನ್ನು ಬೆಸೆಯಬೇಕಾದ ಪ್ರೀತಿ ಬದಲಿಗೆ ವ್ಯಾಮೋಹದ ಸುಳಿಯಲ್ಲಿ ಸಿಲುಕುತ್ತಾರೆ. ಇಂತಹ ಹುಚ್ಚು ಪ್ರೀತಿಯ ಬೆನ್ನ ಹಿಂದೆ ಹೋಗಿರುವ ಪ್ರೇಮಿಗಳು ಇಂದು ತಮ್ಮ ಮನೆಯವರನ್ನೆಲ್ಲ ದೂರಮಾಡಿಕೊಂಡು ಪಶ್ಚಾತ್ತಾಪ ಪಡುತ್ತಿರುವುದನ್ನು ನಾವು ಇಂದಿನ ಸಮಾಜದಲ್ಲಿ ಸಾಕಷ್ಟು ಕಾಣುತ್ತಿದ್ದೇವೆ. ಪಾರ್ಕ್, ಬೀಚ್, ಸಿನಿಮಾ, ಪಾರ್ಟಿ ಹೀಗೆ ಸುತ್ತಾಡಿಕೊಂಡು ಟೈಂ ಪಾಸ್ ಮಾಡುವುದು, ಇಡೀ ಹೊತ್ತು ಫೆÇೀನ್‍ನಲ್ಲಿ ಮಾತನಾಡುವುದು ನಿನ್ನ ಬಿಟ್ಟು ನಾ ಇರಲಾರೆ, ನೀನಿಲ್ಲದೆ ನಾವು ಬದುಕಲಾರೆ ಈ ರೀತಿ ಪ್ರೀತಿಯ ಮಾತುಗಳಿಂದಲೇ ಕರಗಿ ಹೋಗುವುದು ವ್ಯಕ್ತಿಯ ಮೊದಲ ಗುಣ. ನಡತೆ ಅರಿತು ಹೆಜ್ಜೆ ಇಡುವುದು ಸೂಕ್ತ.

ಈಗಿನ ಕಾಲದಲ್ಲಿ ಎಲ್ಲರೂ ಫೇಸ್ ಬುಕ್, ವ್ಯಾಟ್ಸಾಪ್ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನರಾಗಿ ಅದರಿಂದ ಪರಿಚಯವಾಗುವ ಹೆಣ್ಣು-ಗಂಡುಗಳ ಜೊತೆ ಸ್ನೇಹ ಮಾಡಿಕೊಂಡು, ಕೊನೆಗೆ ಅದು ಪ್ರೀತಿಗೆ ತಿರುಗಿ, ಪ್ರೀತಿ ಎಂಬ ಹೆಸರಿನಲ್ಲಿ ಜೀವನ ಹಾಳು ಮಾಡಿಕೊಳ್ಳುವ ಬದಲಿಗೆ ಪ್ರೀತಿಗೆ ಆ ಹುಡುಗ ಅಥವಾ ಹುಡುಗಿ ಯೋಗ್ಯರೇ ಕೊಟ್ಟ ಮಾತಿನಂತೆ ನಡೆದುಕೊಳ್ಳುವರೇ ಎಂಬ ಎಲ್ಲಾ ವಿಚಾರಗಳನ್ನು ಅವಲೋಕಿಸುತ್ತಾ ತಮ್ಮ ಪ್ರೀತಿಗೆ ಲೋಪವಾಗದಂತೆ ಎಚ್ಚರಿಕೆ ವಹಿಸಲೇಬೇಕು. ಇಲ್ಲದಿದ್ದಲ್ಲಿ ದುಃಖ , ಪಶ್ಚಾತ್ತಾಪ ಮಾತ್ರ ಉಳಿಯುತ್ತದೆ.ಪ್ರೇಮ ವಿಫಲವಾದರೆ ಕೆಲವೇ ದಿನಗಳಲ್ಲಿ ಅವಳು/ಅವನನ್ನು ಬಿಟ್ಟು ಬೇರೆ ಸ್ನೇಹಿತರ ಹುಡುಕಾಟದಲ್ಲಿ ತೊಡುಗು ತ್ತಾರೆ. ಇಂತಹ ಪ್ರೇಮಿ ಗಳನ್ನು ಕಂಡ ಜನರಿಗೆ ಪ್ರೀತಿ ಎಂದರೆ ಇಷ್ಟೇನಾ? ಎಂಬ ಪ್ರಶ್ನೆ ಕಾಡುವ ಪರಿಸ್ಥಿತಿ ಉದ್ಭವಿಸು ತ್ತಿದೆ.

ಪ್ರತಿ ದಿನ ಹುಡುಗಿಗೆ ಮೋಸ ಮಾಡಿ ಓಡಿ ಹೋದ ಹುಡುಗ, ಪ್ರಿಯತಮೆಯ ಮೇಲೆ ಅತ್ಯಾಚಾರ ವೆಸಗಿದ ಪ್ರೇಮಿ, ಪ್ರೇಮಿಗಳ ಆತ್ಮಹತ್ಯೆ, ಪ್ರೀತಿಯ ನೆಪದಲ್ಲಿ ಕಾಮದಾಟ ಇಂತಹ ಹಲವಾರು ಸುದ್ದಿಗಳು ಯುವ ಜನರನ್ನಷ್ಟೇ ಅಲ್ಲದೆ ತಂದೆ-ತಾಯಿ, ಪೋಷಕರನ್ನು ಕಂಗೆಡಿಸುತ್ತಿದೆ. ವಿದ್ಯಾವಂತರಾದ ಯುವ ಜನರು ಬಾಹ್ಯ ಆಕರ್ಷಣೆಗಿಂತ ಉತ್ತಮ ಮನಸ್ಸುಳ್ಳವರನ್ನು ಅರಿತು ಸ್ನೇಹ ಮಾಡುವ ಜತೆಗೆ ಸರಿ-ತಪ್ಪುಗಳ ಬಗ್ಗೆ ಸ್ಪಷ್ಟ ನಿರ್ಧಾರ ಹೊಂದಿರುವ ಅವಶ್ಯಕತೆ ಇರುತ್ತದೆ. ಇದರಿಂದ ಮಾತ್ರ ನಮ್ಮ ಜೀವನವನ್ನು ಇಂತಹ ಸಂಕಷ್ಟಗಳಿಂದ ದೂರವಿಡಲು ಸಾಧ್ಯ.ಪ್ರೀತಿ-ಪ್ರೇಮ ಬಾಳಿನ ಅವಿಭಾಜ್ಯ ಅಂಗ. ಆದರೆ ಅದು ಫಲಿಸದೆ ಹೋದಾಗ ಆಗುವ ನೋವು, ಹತಾಶೆಯನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.ಈ ಕುರಿತು ಹುಡುಗರಲ್ಲಿ ಹುಡುಗಿಯರ ಬಗ್ಗೆ ಕೇಳಿದಾಗ ಅವರಿಂದ ಉತ್ತರ ಈ ಹುಡುಗಿಯರು ಮೋಸಗಾರರು, ಪ್ರೀತಿಯ ಮಾತುಗಳಿಂದ ಹುಡುಗರನ್ನು ಸೆಳೆದು ಅವರ ಬಾಳಲ್ಲಿ ಆಟವಾಡುವವರು ಎಂದು ಹುಡುಗಿಯರ ಬಗ್ಗೆ ದೂರಿದರೆ, ಅದೇ ಪ್ರಶ್ನೆಯನ್ನು ಹುಡುಗಿಯರಿಗೆ ಕೇಳಿದಾಗ ಹುಡುಗರು ಮೋಸಗಾರರು, ಅವರಿಗೆ ಪ್ರೀತಿಯ ಅರ್ಥ ಗೊತ್ತಿಲ್ಲ, ಎಲ್ಲ ಹುಡುಗಿಯರ ಜೊತೆ ಚೆಲ್ಲಾಟವಾಡುತ್ತಾ ಕಾಲ ಕಳೆಯುತ್ತಾರೆ. ನಮ್ಮ ಪ್ರೀತಿಗೆ ಬೆಲೆನೇ ಕೊಡುವುದಿಲ್ಲ ಎಂದು ಹುಡುಗರ ಬಗ್ಗೆ ಪ್ರತಿಯಾಗಿ ದೂರುತ್ತಾರೆ.

ಹಾಗಾದರೆ ನಿಜವಾಗಿ ಪ್ರೀತಿಯೆಂಬ ಪ್ರಶ್ನೆಗೆ ಉತ್ತರವೇನು..? ಪ್ರೀತಿ ಮಾಡಿ, ಆದರೆ ಆ ಪ್ರೀತಿಯಲ್ಲಿ ಅನುಮಾನ ಬೇಡ. ನಿಜ ಆದರೆ ಎಲ್ಲಾ ಮಾತಿಗೂ ಮರುಳಾಗಬೇಡಿ. ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ತೋರಬೇಕು. ಮೊದಲು ಆ ವ್ಯಕ್ತಿಯ ವ್ಯಕ್ತಿತ್ವ ಏನು ಎಂಬುದನ್ನು ತಿಳಿದುಕೊಳ್ಳಿ. ನಿಮಗೆ ಒಪ್ಪಿಗೆಯಾದರೆ, ನಿಮ್ಮ ಕಷ್ಟಗಳಿಗೆ ಭಾಗಿಯಾಗುತ್ತಾನೆ ಎಂಬ ನಂಬಿಕೆ ನಿಮ್ಮಲ್ಲಿ ಇದ್ದರೆ ಆ ವ್ಯಕ್ತಿಯ ಪ್ರೀತಿಯನ್ನು ಒಪ್ಪಿಕೊಳ್ಳಿ.ಆತುರದ ನಿರ್ಧಾರ ಒಳ್ಳೆಯದಲ್ಲ, ಆಪ್ತರು, ಸ್ನೇಹಿತರು, ಪರಿಚಯಸ್ಥರ ಸಲಹೆ-ಸೂಚನೆಯನ್ನು ಕಡೆಗಣಿಸುವುದು ಸರಿಯಲ್ಲ. ಇದರೊಂದಿಗೆ ಮನೆಯ ಹಿರಿಯರ ಆಶೋತ್ತರಗಳಿಗೂ ಸ್ಪಂದಿಸುವ ಮೂಲಕ ಭವಿಷ್ಯದ ಕಡೆಗೂ ಸ್ವಲ್ಪ ಗಮನ ಕೊಡಿ. ನಿನ್ನೆ ಮೊನ್ನೆ ಬಂದ ಪ್ರೀತಿಯೇ ಹೆಚ್ಚೆಂದು ತಿಳಿದು ತಮ್ಮನ್ನು ಸಾಕಿ ಸಲುಹಿದ ತಂದೆ-ತಾಯಿಯ ಪ್ರೀತಿಯನ್ನು ಮರೆತು ಅವರನ್ನು ದೂರ ಮಾಡಿಕೊಳ್ಳಬೇಡಿ.

ಪ್ರೀತಿಗೆ ಬಾಯಿಂದ ಬರುವ ಮಾತು ಮುಖ್ಯ ವಲ್ಲ, ಹೃದಯದಿಂದ ಬರುವ ಪ್ರೀತಿಯೇ ಮುಖ್ಯ. ಪ್ರೀತಿಗೆ ಕಣ್ಣಿಲ್ಲವೆಂಬುದು ನಿಜ.ಆದರೆ ಪ್ರೀತಿಸುವವರಿಗೆ ಕಣ್ಣಿದೆ ಅಲ್ವಾ? ಪ್ರೀತಿ ಒತ್ತಾಯದಿಂದ ಬರಬಾರದು,ಅದು ಹೃದಯದಿಂದ ಬರಬೇಕು.ಪ್ರೀತಿ ಮಾಡುತ್ತೇನೆ ಎಂದ ತಕ್ಷಣ ಕೆಲವು ಹುಡುಗಿಯರು ಅವರ ಪ್ರೀತಿಯೇ ಅಮೂಲ್ಯ.ನನಗೆ ಇವನನ್ನು ಬಿಟ್ಟರೆ ಇಂಥ ಒಳ್ಳೆಯ ಹುಡುಗ ಸಿಗಲಾರ ಎಂಬು ಹುಚ್ಚು ಕಲ್ಪನೆ ಮನಸ್ಸಿನಲ್ಲಿ ಬಂದು ಬಿಡುತ್ತದೆ. ಸ್ಮಾರ್ಟ್ ಇದ್ದಾನೆ, ಹಣ ಇದೆ, ಒಳ್ಳೆಯ ಕೆಲಸ ಇದೆ ಇನ್ನೇನು ಬೇಕು ಎನ್ನುವ ಪರಿಕಲ್ಪನೆ ಬೇಡ. ಪರಿಕಲ್ಪನೆ ಬಿಟ್ಟು ನಿಮ್ಮನ್ನು ಪ್ರೀತಿಸುವ ಮನಸ್ಸಿಗೆ ಬೆಲೆ ಕೊಡಿ.
                                                                                                                                                                   -ಕೆ.ಎನ್.ಅಕ್ರಂಪಾಷ, ಚಿಂತಾಮಣಿ

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin