ಶ್ರೀ ಮೋಟಗಿ ಬಸವೇಶ್ವರ ಜಾನುವಾರ ಜಾತ್ರೆ ಮಹೋತ್ಸವ ಪ್ರಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

9

ಬಾಗಲಕೋಟೆ,ಫೆ.14- ಜಿಲ್ಲೆಯ ಕೇಸನೂರ ಮಾರುಕಟ್ಟೆ ಪ್ರಾಂಗಣದಲ್ಲಿ ಈಗಾಗಲೇ ಪ್ರಾರಂಭವಾಗಿರುವ ಶ್ರೀ ಮೋಟಗಿ ಬಸವೇಶ್ವರ ಜಾನುವಾರ ಜಾತ್ರೆಯು ಬೃಹತ್ ಪ್ರಮಾಣದಲ್ಲಿ ನಡೆಯಲಿದ್ದು ಇದರ ಅಂಗವಾಗಿ ಉತ್ತಮ ತಳಿಯ ಜಾನುವಾರುಗಳ ಪ್ರದರ್ಶನ ಮತ್ತು ಆಯ್ಕೆಯಾದ ತಳಿಗಳಿಗೆ ಸೂಕ್ತ ಬಹುಮಾನ ಸಿಗಲಿದೆ. ಹಾಲಲ್ಲಿ ಹೋರಿಗೆ ಪ್ರಥಮ ಬಹುಮಾನ ರೂ 10000-/, ದ್ವಿತೀಯ ಬಹುಮಾನ ರೂ 7500-/, ತೃತೀಯ ಬಹುಮಾನ ರೂ 5000-/ ದೊರೆಯಲಿದೆ ಹಾಗೂ ನಾಲ್ಕು ಹಲ್ಲಿನ ಹೋರಿಗೆ, ಜೋಡು ಎತ್ತುಗಳಿಗೆ, ಎರಡು ಹಲ್ಲಿನ ಹೋರಿಗೆ, ಆರು ಹಲ್ಲಿನ ಹೋರಿಗೆ, ಜರ್ಸಿ ದೇವನಿ, ಕಿಲಾರಿ ಆಕಳುಗಳಿಗೆ ತಲಾ ಪ್ರಥಮ ಬಹುಮಾನ ರೂ 7000-/, ದ್ವಿತೀಯ ಬಹುಮಾನ ರೂ 4000-/, ತೃತೀಯ ಬಹುಮಾನ ರೂ 2000-/ ದೆರೆಯಲಿದೆ.ನಾಳೆ ಬೆಳಗ್ಗೆ ಉತ್ತಮ ಜಾನುವಾರುಗಳ ಆಯ್ಕೆಯು ಜಾತ್ರಾ ಕಚೇರಿಯ ಎದುರುಗಡೆ ನಡೆಯುತ್ತದೆ.ಇಲ್ಲಿ ಜಾನುವಾರುಗಳಿಗೆ ಯಾವುದೇ ರೀತಿಯ ನೀರಿನ ಕೊರೆತೆ ಇರುವುದಿಲ್ಲ. ಏಕೆಂದರೆ ಗದ್ದನಗಿರಿ ಗ್ರಾಮದ ಡಾ. ಬೂದಿಹಾಳ ಅವರು ನೀರಿನ ಸೌಲಭ್ಯ ಒದಗಿಸಿದ್ದಾರೆ ಹಾಗೂ ಅವರು 2 ಟ್ಯಾಂಕರ್ ಸಪ್ಲಾಯ್ ಮಾಡುತ್ತಿದ್ದಾರೆ.

ಅಲ್ಲಿ ಸುಮಾರು 10-12ರವರೆಗೆ ಡೋಣಿಗಳಿವೆ. ಹಾಗಾಗಿ ಯಾವುದೇ ಜಾನುವಾರುಗಳಿಗೆ ನೀರಿನ ತೊಂದರೆಯಾಗುವುದಿಲ್ಲ. ಡಾ. ಶಿವರಾಮ ಪಾಟೀಲ ಪಶು ವೈದ್ಯಾಧಿಕಾರಿಗಳು ಮತ್ತು ಪಶು ಸಂಘೋಪಣೆ ಇಲಾಖೆ ಅವರು ಯಾವುದೇ ಜಾನುವಾರುಗಳಿಗೆ ತೊಂದರೆಯಾದರೆ ಅದರ ಚಿಕಿತ್ಸೆಯ ಜಾವಾಬ್ದಾರಿಯನ್ನು ವಹಿಸಲಿದ್ದಾರೆ. ಇಲ್ಲಿ ಪೊಲೀಸ್ ಸೆಕ್ಯುರಿಟಿ ಇದ್ದು ಪೊಲೀಸ್ ವ್ಯವಸ್ಥಾಪಕರಿಗೆ ಊಟದ ವ್ಯವಸ್ಥೆ ಇದೆ ಹಾಗಾಗಿ ಯಾವುದೇ ತೊಣದರೆಗಳು ನಡೆಯುವುದಿಲ್ಲ.ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಚ್.ವಾಯ್. ಮೇಟಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವರಾದ ಉಮಾಶ್ರೀ, ಎಸ್.ಎಸ್ ಮಲ್ಲಿಕಾರ್ಜುನ, ಸಂಸದ ಪಿ.ಸಿ. ಗದ್ದಿಗೌಡರ, ಜಿಪಂ ಅಧ್ಯಕ್ಷೆ ವೀಣಾ. ವ್ಹಿ. ಕಾಶಪ್ಪನವರ, ಶಾಸಕ ಜೆ.ಟೆ. ಪಾಟೀಲ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಎಸ್.ಎನ್ ಪತ್ತಾರ, ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ ಆಗಮಿಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin