ಜಯಲಲಿತಾ ಸಮಾಧಿಗೆ ಬಡಿದು ಶಶಿಕಲಾ ಮಾಡಿದ ಪ್ರತಿಜ್ಞೆ ಏನು..?

ಈ ಸುದ್ದಿಯನ್ನು ಶೇರ್ ಮಾಡಿ

Chinnamma-01

ಚೆನ್ನೈ,ಫೆ.15-ಸಿಟ್ಟು ,ರೋಷಾವೇಶ ವಿ.ಶಶಿಕಲಾ ನಟರಾಜನ್ ಅವರ ಮುಖದಲ್ಲಿ ಕಾಣುತ್ತಿತ್ತು. ಮರೀನಾ ಬೀಚ್‍ನಲ್ಲಿರುವ ಜಯಲಲಿತಾ ಅವರ ಸಮಾಧಿ ಬಳಿ ಬಂದ ಅವರು ನಮಿಸಿ ಸಮಾಧಿ ಮೇಲೆ ಮೂರು ಬಾರಿ ಆಕ್ರೋಶಭರಿತರಾಗಿ ತಮ್ಮ ಕೈಯಿಂದ ಜೋರಾಗಿ ಬಡಿದರು. ಮನಸ್ಸಿನಲ್ಲಿ ಅದೇನೋ ಹೇಳಿಕೊಂಡು ಪ್ರತಿಜ್ಞೆ ಮಾಡಿದಂತಿತ್ತು.   ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಶಶಿಕಲಾ ಸುಪ್ರೀಂಕೋರ್ಟ್‍ನ ಆದೇಶದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಪ್ರಯಾಣ ಬೆಳೆಸುವ ಮುನ್ನಾ ಪೋಯಸ್ ಗಾರ್ಡನ್‍ನಲ್ಲಿರುವ ಜಯಲಲಿತಾ ನಿವಾಸದಿಂದ ಚೆನ್ನೈನ ಮರೀನಾ ಬೀಚ್‍ಗೆ ತೆರಳಿ ಜಯಲಲಿತಾ ಸಮಾಧಿಗೆ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅದೇನೆನ್ನಿಸಿತೋ ಏನೋ ಅವರು ನಮನ ಸಲ್ಲಿಸುವ ವೇಳೆ ಪ್ರತಿಜ್ಞೆ ಮಾಡುವ ರೀತಿಯಲ್ಲಿ ಸಮಾಧಿ ಮೇಲೆ ಮೂರು ಬಾರಿ ತಮ್ಮ ಬಲಗೈಯಿಂದ ಜೋರಾಗಿ ತಟ್ಟಿದರು.
ಮನಸ್ಸಿನಲ್ಲಿ ಏನೋ ಅಂದುಕೊಂಡರು. ನಂತರ ತಲೆಬಾಗಿ ನಮಿಸಿ ಹಿಂದಿರುಗಿ ಹೊರಟರು. ನಿನ್ನೆ ರಾತ್ರಿ ಎಐಎಡಿಎಂಕೆ ಮುಖಂಡರೊಂದಿಗೆ ಸಭೆ ನಡೆಸುವಾಗ ನಾನು ಜೈಲಿನಲ್ಲಿದ್ದರೂ ನನ್ನ ಮನಸ್ಸು ಇಲ್ಲೇ ಇರುತ್ತದೆ. ಯಾರು ಏನೇ ಮಾಡಿದರೂ ಪಕ್ಷವನ್ನು ಒಡೆಯುವುದು ಬೇಡ ಎಂದು ಹೇಳಿದ್ದರು. ಇಂದು ಬೆಳಗ್ಗೆ ಹಲವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಜೈಲಿಗೆ ಹೋಗುವ ಕೊನೆಯ ಸಂದರ್ಭದಲ್ಲೂ ಕೂಡ ಪಕ್ಷದಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದರು.

ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕನಾಗಿ ಯಡಪ್ಪಾಡಿ ಪಳನಿ ಸ್ವಾಮಿ ಅವರನ್ನು ನಾಯಕರನ್ನಾಗಿ ಮಾಡಿದ್ದರು. ಇಂದು ಕೊನೆಯ ಕ್ಷಣದಲ್ಲಿ ಜಯಾ ಭಾವಚಿತ್ರಕ್ಕೆ ನಮನ ಸಲ್ಲಿಸಿ ಶಪಥ ಮಾಡಿ ಸಮಾಧಿಗೆ ಕೈ ಬಡಿದು, ಮನಸ್ಸಿನಲ್ಲಿ ಪ್ರತಿಜ್ಞೆ ಮಾಡಿ ಜೈಲಿಗೆ ತೆರಳಿದ್ದು ವಿಶೇಷವಾಗಿತ್ತು. ಜಯಾ ಬಳಸುತ್ತಿದ್ದ ಕಾರಿನಲ್ಲೇ ಶಶಿಕಲಾ ಅವರು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದು , ಇಲ್ಲಿನ ವಿಶೇಷ ಕೋರ್ಟ್ ಮುಂದೆ ಶರಣಾಗಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin