ಶಶಿಕಲಾ ಪ್ರಕರಣ : ಮತ್ತೆ ರಚನೆಯಾಯ್ತು ವಿಶೇಷ ನ್ಯಾಯಾಲಯ

ಈ ಸುದ್ದಿಯನ್ನು ಶೇರ್ ಮಾಡಿ

Sasikala--01

ಬೆಂಗಳೂರು,ಫೆ.15- ಅಕ್ರಮ ಆಸ್ತಿ ಪ್ರಕರಣ ಗಳಿಕೆ ಹಿನ್ನೆಲೆಯಲ್ಲಿ ನಿನ್ನೆ ಆರೋಪ ಸಾಬೀತಾದ ಕಾರಣ ಎಐಎಡಿಎಂಕೆ ನಾಯಕಿ ವಿ.ಶಶಿಕಲಾ ನಟರಾಜನ್ ಸೇರಿದಂತೆ ನಾಲ್ವರಿಗೆ ಸುಪ್ರೀಂಕೋರ್ಟ್ ಶಿಕ್ಷೆ ಪ್ರಕಟಿಸಿರುವ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ರಚನೆ ಮಾಡಲಾಗಿದೆ.   ತಮಿಳುನಾಡಿನ ಮುಖ್ಯಮಂತ್ರಿ ದಿ.ಜಯಲಲಿತಾ, ಶಶಿಕಲಾ, ಇಳವರಸಿ, ಸುಧಾಕರನ್ ಸೇರಿದಂತೆ ಐವರು ಆರೋಪಿಗಳಾಗಿದ್ದ ಸಂದರ್ಭದಲ್ಲಿ ರಚನೆಯಾಗಿದ್ದ ವಿಶೇಷ ನ್ಯಾಯಾಲಯ ನ್ಯಾಯಮೂರ್ತಿ ಮೈಕಲ್.ಡಿ ಕುನ್ಹಾ ಅವರು ತೀರ್ಪು ನೀಡಿದ ನಂತರ ರದ್ದುಗೊಂಡಿತ್ತು.
ನಿನ್ನೆ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ಮತ್ತೆ ರಚನೆಯಾಗಿದ್ದು , ಈ ನ್ಯಾಯಾಲಯಕ್ಕೆ ನ್ಯಾ.ಅಶ್ವಥ್ ನಾರಾಯಣ್ ಅವರನ್ನು ನಿಯೋಜನೆ ಮಾಡಲಾಗಿದೆ. ಪರಪ್ಪನ ಅಗ್ರಹಾರ ಆವರಣದಲ್ಲಿ ವಿಶೇಷ ನ್ಯಾಯಾಲಯ ರಚಿಸಲು ನಿರ್ಧರಿಸಲಾಗಿದ್ದು , ಈ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ ಜೊತೆ ಮಾತುಕತೆ ನಡೆಸಲಾಗಿದೆ.

ಕೋರ್ಟ್ ಹಾಲ್ ನಂಬರ್ 48ನ್ನು ವಿಶೇಷ ನ್ಯಾಯಾಲಯವನ್ನಾಗಿ ಪರಿವರ್ತಿಸುವ ಬಗ್ಗೆಯೂ ಕೂಡ ಚರ್ಚೆ ನಡೆದಿತ್ತು. ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲು ಆವರಣದಲ್ಲಿ ವಿಶೇಷ ನ್ಯಾಯಾಲಯ ರಚಿಸಲು ನಿರ್ಧರಿಸಲಾಗಿದೆ.   ಪ್ರಕರಣ ಸಂಬಂಧ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪು ಹಾಗೂ ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ತರಿಸಿಕೊಂಡು ನ್ಯಾ.ಅಶ್ವಥ್ ನಾರಾಯಣ್ ಅವರು ದಾಖಲೆಗಳ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅಪರಾಧಿಗಳಾಗಿರುವ ಶಶಿಕಲಾ ಮತ್ತಿತರರು ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ ಅಲ್ಲಿಂದ ಪರಪ್ಪನ ಅಗ್ರಹಾರ ಜೈಲಿಗೆ ಹೋಗಬೇಕಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin