2015ರಲ್ಲಿ ವಾಯು ಮಾಲಿನ್ಯದಿಂದ ಭಾರತ ಮತ್ತು ಚೀನಾದಲ್ಲಿ 22 ಲಕ್ಷ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Air-Pollution-01

ಶಾಂಘೈ, ಫೆ.15-ವಾಯು ಮಾಲಿನ್ಯದ ಕಾರಣದಿಂದ 2015ರಲ್ಲಿ ಜಗತ್ತಿನಾದ್ಯಂತ ಸಂಭವಿಸಿದ 42 ಲಕ್ಷಕ್ಕೂ ಅಧಿಕ ಅಕಾಲಿಕ ಸಾವು ಪ್ರಕರಣಗಳಲ್ಲಿ ಭಾರತ ಮತ್ತು ಚೀನಾದಲ್ಲಿ 22 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಅಮೆರಿಕದ ಹೆಲ್ತ್ ಎಫೆಕ್ಟ್ಸ್ ಇನ್ಸ್‍ಟಿಟ್ಯೂಟ್ (ಎಚ್‍ಇಐ) ನಡೆಸಿದ ಅಧ್ಯಯನದಿಂದ ಈ ಆತಂಕಕಾರಿ ಸಂಗತಿ ಬಹಿರಂಗಗೊಂಡಿದೆ.  ಕಳೆದ ವರ್ಷ ವಾಯು ಮಾಲಿನ್ಯದಿಂದ ಉಂಟಾದ ಜÁಗತಿಕ ಸಾವುಗಳ ಪೈಕಿ ಅರ್ಧದಷ್ಟು ಮರಣಗಳು ಈ ಎರಡೂ ರಾಷ್ಟ್ರಗಳಲ್ಲಿ ಸಂಭವಿಸಿದೆ ಎಂಬುದು ಇದರಿಂದ ದೃಢಪಟ್ಟಿದೆ. ಭಾರತ ಮತ್ತು ಚೀನಾದಲ್ಲಿ ತಲಾ 11 ಲಕ್ಷ ಸಾವುಗಳು ಸಂಭವಿಸಿರುವುದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವ ಜನಸಂಖ್ಯೆಯ ಶೇ.92ರಷ್ಟು ಮಂದಿ ಅನಾರೋಗ್ಯಕರ ವಾಯು ಇರುವ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ. ವಾಯು ಮಾಲಿನ್ಯವು ಹೆಚ್ಚಿನ ಪ್ರಮಾಣದಲ್ಲಿ ಕ್ಯಾನ್ಸರ್, ಪಾಶ್ರ್ವವಾಯು, ಆಸ್ತಮಾ, ಉಸಿರಾಟ ತೊಂದರೆ ಮತ್ತು ಹೃದಯ ಸಂಬಂಧಿ ಮೊದಲಾದ ರೋಗಗಳಿಗೆ ಕಾರಣವಾಗುತ್ತದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.   ಇನ್ನೊಂದು ವರದಿ ಪ್ರಕಾರ ಕಳೆದ ವರ್ಷ ಓಜೋನ್ ಡ್ಯಾಮೇಜ್‍ನಿಂದ ಭಾರತದಲ್ಲಿ 2.54 ಲಕ್ಷ ಮಂದಿ ಮೃತಪಟ್ಟಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin