ಆರೋಗ್ಯ ಕಾಪಾಡಲು ಜಂತು ಹುಳು ನಿಯಂತ್ರಣ ಅಗತ್ಯ

ಈ ಸುದ್ದಿಯನ್ನು ಶೇರ್ ಮಾಡಿ

malavali2
ಪಾಂಡವಪುರ, ಫೆ.16- ಮಕ್ಕಳು ಆರೋಗ್ಯವಂತರಾಗಿರಲು ಜಂತು ಹುಳು ನಿಯಂತ್ರಣ ಮಾತ್ರೆ ಸೇವನೆ ಮಾಡಿ ಆರೋಗ್ಯ ಭಾಗ್ಯ ಕಾಪಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ಡಿ.ಹನುಮಂತರಾಯಪ್ಪ ಕರೆ ನೀಡಿದರು.ಪಟ್ಟಣದ ಫ್ರೆಂಚ್‍ರಾಕ್ಸ್ ಶತಮಾನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಜಂತುಹುಳು ಮಾತ್ರೆ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಮಕ್ಕಳಲ್ಲಿ ರಕ್ತ ಹೀನತೆ, ಪೌಷ್ಠಿಕಾಂಶ ಕೊರತೆ, ಹಸಿವು ಇಲ್ಲದಿರುವುದು, ಹೊಟ್ಟೆನೋವು, ವಾಂತಿ, ಬೇದಿ, ಮಲದಲ್ಲಿ ರಕ್ತ ಹೊರಹೋಗುವುದು ಜಂತುಹುಳು ರೋಗದ ಪ್ರಮುಖ ಲಕ್ಷಣಗಳಾಗಿರುತ್ತವೆ. ಹೀಗಾಗಿ ಮಕ್ಕಳು ಜಂತು ಹುಳು ಮಾತ್ರೆ ಸೇವನೆ ಮಾಡಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಎನ್.ಆಶಾಲತಾ ಮಾತನಾಡಿ, ಮಕ್ಕಳು ಶೌಚಗೃಹಕ್ಕೆ ತೆರಳುವಾಗ ಚಪ್ಪಲಿ ಧರಿಸಬೇಕು. ಯಾವಾಗಲೂ ಕಾಲಿಗೆ ಚಪ್ಪಲಿ, ಶೂನಿಂದ ರಕ್ಷಣೆ ಪಡೆದುಕೊಳ್ಳಬೇಕು. ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದಂದು ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ಜಂತುಹುಳು ಮಾತ್ರೆ ನೀಡಲಾಗುತ್ತದೆ. ಇದನ್ನು ಸದುಪರ್ಯಗಪಡಿಸಿಕೊಳ್ಳಿ ಎಂದು ತಿಳಿಸಿದರು.ಮಕ್ಕಳಲ್ಲಿ ಉಂಟಾಗುವ ರಕ್ತ ಹೀನತೆ ತಡೆಗಟ್ಟಿ, ಪೌಷ್ಠಿಕಾಂಶದ ಕೊರತೆ ನಿವಾರಿಸುವುದು, ರೋಗ ನಿರೋಧಕ ಶಕ್ತಿ ವೃದ್ಧಿಸುವುದು, ಜ್ಞಾಪಕ ಶಕ್ತಿ ಹೆಚ್ಚಿಸಿ ಕಲಿಯುವ ಆಸಕ್ತಿ ಮೂಡಿಸುವುದು ಜಂತುಹುಳು ನಿರ್ಮೂಲನೆ ದಿನಾಚರಣೆ ಮುಖ್ಯ ಉದ್ದೇಶ ಎಂದರು.ಎಸ್‍ಡಿಎಂಸಿ ಅಧ್ಯಕ್ಷ ಎನ್.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿತಾ ವೈದ್ಯಾಧಿಕಾರಿ ಡಾ.ಜಯಂತ್, ಶಿಕ್ಷಣ ಸಂಯೋಜಕರಾದ ಶಂಕರಾಚಾರ್, ಚಲುವರಾಜು, ಆರೋಗ್ಯ ಶಿಕ್ಷಣಾಧಿಕಾರಿ ರಾಜು, ಆರೋಗ್ಯ ಸಹಾಯಕಿಯರಾದ ಲಕ್ಷ್ಮಮ್ಮ, ಡೈಸಿ, ಫ್ರೆಂಚ್‍ರಾಕ್ಸ್ ಶಾಲೆಯ ಮುಖ್ಯ ಶಿಕ್ಷಕ ಡಿ.ಸಿ.ಯೋಗಣ್ಣ, ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮ ಇತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin