ಎಸ್‍ಐ ನಿಂದ ಹಿಡಿದು ಡಿಜಿವರೆಗೂ ತಮ್ಮ ನಡವಳಿಕೆ ಬಗ್ಗೆ ಬಹಳ ಎಚ್ಚರದಿಂದ ಇರಬೇಕು ; ಗರುಡಾಚಾರ್ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

Police

ಬೆಂಗಳೂರು, ಫೆ.16-ಎಸ್‍ಐ ಅವರಿಂದ ಹಿಡಿದು ಡಿಜಿವರೆಗೂ ಎಲ್ಲರೂ ತಮ್ಮ ನಡವಳಿಕೆ ಬಗ್ಗೆ ಬಹಳ ಎಚ್ಚರದಿಂದ ಇರಬೇಕು ಎಂದು ನಿವೃತ್ತ ಡಿಜಿಪಿ ಬಿ.ಎನ್.ಗರುಡಾಚಾರ್ ಸಲಹೆ ಮಾಡಿದರು.  ಪೊಲೀಸ್ ಪ್ರಧಾನ ಕಚೇರಿ ಸಭಾಂಗಣದಲ್ಲಿ ಗರುಡಾಚಾರ್ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಗರುಡಧ್ವಜ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರು ಪೊಲೀಸರಿಂದ ಏನನ್ನು ನಿರೀಕ್ಷಿಸುತ್ತಿದ್ದಾರೋ ಅದನ್ನು ಪೂರೈಸುವಲ್ಲಿ ಶ್ರಮ ವಿಸಬೇಕೆಂದರು.  ಪೊಲೀಸ್ ವ್ಯವಸ್ಥೆಯಲ್ಲಿ ಹಿಂದೆ ಇದ್ದ ವೃತ್ತಿಪರತೆ ಈಗ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ನಿಟ್ಟಿನಲ್ಲಿ ಸುಧಾರಣೆ ಆಗಬೇಕೆಂದು ಹೇಳಿದರು.

ನಿವೃತ್ತ ಡಿಜಿಪಿ ಡಿ.ವಿ.ಗುರುಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಗರುಡಾಚಾರ್ ಅವರು, ನಾನು ಎಲ್ಲಾ ರಾಜಕಾರಣಿಯೊಂದಿಗೆ ಅಂತರದ ಸ್ನೇಹ ಕಾಯ್ದುಕೊಂಡಿದ್ದೆ. ಆಗಿನ ರಾಜಕಾರಣಿಗಳು ಹಾಗೆಯೇ ಇದ್ದರು. ಆದರೆ, ಈಗಿನ ರಾಜಕಾರಣದ ಸ್ಥಿತಿ ಭಿನ್ನವಾಗಿದೆ ಎಂದು ತಿಳಿಸಿದರು.  ಇದಕ್ಕೂ ಮುನ್ನ ಮಾತನಾಡಿದ ನಿವೃತ್ತ ಡಿಜಿಪಿ ಡಿ.ವಿ.ಗುರುಪ್ರಸಾದ್ ಅವರು, ವರ್ಗಾವಣೆ ಸಮಯದಲ್ಲಿ ರಾಜಕಾರಣಿಗಳನ್ನು ನಿರ್ವಹಿಸುವ ಕಲೆ ಗರುಡಾಚಾರ್ ಅವರಿಗೆ ಕರಗತವಾಗಿತ್ತು ಎನ್ನುತ್ತಾ ಈಗಿನ ಪೊಲೀಸರಿಗೆ ಆ ಬಗ್ಗೆ ತಿಳಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿದರು.

ಗರುಡಾಚಾರ್ ಅವರ ಹುಟ್ಟು, ಬಾಲ್ಯ, ವಿದ್ಯಾಭ್ಯಾಸ, ವೃತ್ತಿ, ಕೌಂಟುಬಿಕ ಜೀವನ, ಪೊಲೀಸ್ ಅಧಿಕಾರಿಯಾಗಿದ್ದಾಗ ತೋರಿದ ವೃತ್ತಿನಿಷ್ಠೆ, ಸಮಯ ಪಾಲನೆ, ಸಾಹಸ, ಸಾಮಾಜಿಕ ಕಳಕಳಿ, ಭಾಷಾಭಿಮಾನ ಕುರಿತ ಸಮಗ್ರ ಚಿತ್ರಣದ ಗರುಡಧ್ವಜ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಡಿಜಿಪಿ ರೂಪಕ್ ಕುಮಾರ್, ನಾನು ಎಸ್‍ಪಿಯಾಗಿ ಇಲ್ಲಿ ಅಧಿಕಾರ ವಹಿಸಿಕೊಂಡಾಗ ಗರುಡಾಚಾರ್ ಅವರು ಡಿಜಿಪಿ ಆಗಿದ್ದರು. ಈಗ ನಾನು ಡಿಜಿಪಿ ಆಗಿ ಅವರ ಜೀವನಾಧಾರಿತ ಕೃತಿ ಬಿಡುಗಡೆ ಮಾಡುತ್ತಿರುವುದು ಹೆಮ್ಮೆ ತಂದಿದೆ ಎಂದು ಹೇಳಿದರು. ಕೃತಿಯಲ್ಲಿ ಗರುಡಾಚಾರ್ ಅವರ ಒಡನಾಟದ ಕುರಿತು ವಾಟಾಳ್ ನಾಗರಾಜ್, ಕೆ.ವಿ.ಆರ್.ಠಾಗೋರ್, ಡಾ.ಶ್ಯಾಮಲಾ ಜಿ.ಭಾವೆ, ಅಭಿಮಾನಿ ಸಮೂಹದ ಟಿ.ವೆಂಕಟೇಶ್, ಗರುಡಗಿರಿ ನಾಗರಾಜ್, ಡಾ.ಕೋಮಲಾ ಮಂಜುನಾಥ್, ಡಾ.ಮಾಸ್ಟರ್ ಹಿರಣ್ಣಯ್ಯ, ಜೀವನ್‍ಕುಮಾರ್ ವಿ.ಗಾಂವ್ಕರ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin