ಬಸ್‍ನ ಚಕ್ರಕ್ಕೆ ಸಿಲುಕಿ ಶಾಲಾ ಬಾಲಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮಾಲೂರು,ಫೆ.16-ಶಾಲಾ ಬಸ್ಸೊಂದು ರಿವರ್ಸ್ ಪಡೆದುಕೊಳ್ಳುತ್ತಿದ್ದಾಗ ಬಾಲಕ ಬಸ್‍ನ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಮಾಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮಾಲೂರು ತಾಲ್ಲೂಕಿನ ನಂಬಿಗೇನಹಳ್ಳಿ ನಿವಾಸಿ ರಘು ಎಂಬುವರ ಪುತ್ರ ಸುಹಾಸ್(5) ಮೃತಪಟ್ಟ ನತದೃಷ್ಟ ಬಾಲಕ. ಇಂದು ಬೆಳಗ್ಗೆ ಮನೆ ಸಮೀಪ ಈ ಬಾಲಕ ನಿಂತಿದ್ದಾಗ ಒಕ್ಕಲೇರಿಯದ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಗೆ ಸೇರಿದ ಶಾಲಾ ಬಸ್ಸೊಂದು ರಿವರ್ಸ್ ಪಡೆಯುವ ವೇಳೆ ಈ ಬಾಲಕನಿಗೆ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಬಾಲಕ ಬಸ್‍ನ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಘಟನೆ ಸಂಭವಿಸುತ್ತಿದ್ದಂತೆ ಬಸ್ ಚಾಲಕ ಪರಾರಿಯಾಗಿದ್ದಾನೆ. ಆಕ್ರೋಶಗೊಂಡ ಸಾರ್ವಜನಿಕರು ಹಾಗೂ ಕುಟುಂಬದವರು ಕೂಡಲೇ ಚಾಲಕನನ್ನು ಬಂಧಿಸಬೇಕೆಂದು ಪಟ್ಟುಹಿಡಿದರು. ಈ ಸಂಬಂಧ ರಘು ಅವರು ನೀಡಿದ ದೂರಿನ ಮೇರೆಗೆ ಮಾಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin