ಮೈಲಾರಲಿಂಗೇಶ್ವರನ ಜಾತ್ರೆ : ಕಂಚಾವೀರರಿಂದ ಮೈನವಿರೇಳಿಸುವ ಶಸ್ತ್ರಪವಾಡ

ಈ ಸುದ್ದಿಯನ್ನು ಶೇರ್ ಮಾಡಿ

7

ಹೂವಿನಹಡಗಲಿ,ಫೆ.15- ಸುಕ್ಷೇತ್ರ ಮೈಲಾರದಲ್ಲಿ ಮೈಲಾರಲಿಂಗೇಶ್ವರನ ಜಾತ್ರೆಯ ಕೊನೆಯ ದಿನವಾದ ನಿನ್ನೆ ದೇವಸ್ಥಾನದ ಆವರಣದಲ್ಲಿ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರ ಆಶೀರ್ವಾದ ಪಡೆದ ಕಂಚಾವೀರರಿಂದ ವಿವಿಧ ಶಸ್ತ್ರ ಪವಾಡ ಹಾಗೂ ಕಬ್ಬಿಣದ ಸರಪಳಿ ಹರಿಯುವ ಕಾರ್ಯಕ್ರಮಗಳು ಜರುಗಿದವು.ಪವಾಡ ಮಾಡುವ ಕಂಚಾವೀರರ ವಂಶಸ್ಥರಲ್ಲಿ ಸರದಿಯ ಪ್ರಕಾರ ವರ್ಷಕ್ಕೆ ಒಂದು ಮನೆಯವರಂತೆ ಪವಾಡ ಮಾಡುವುದು ಸಂಪ್ರದಾಯ. ಅದರಂತೆ ಈ ಬಾರಿ ನಾಗರಾಜ ಕಂಚಾವೀರ, ಅರುಣ ಕಂಚಾವೀರ ಹಾಗೂ ಮಂಜುನಾಥ ಕಂಚಾವೀರ ಎಂಬ ಯವಕರು ತನ್ನ ಕಾಲಿನ ಮೀನಗಂಡದಲ್ಲಿ ಸುಮಾರು 4 ಅಡಿ ಉದ್ದದ ಕಬ್ಬಿಣದ ಸರಳನ್ನು ದಾಟಿಸುವ ಪವಾಡ ನೋಡುಗರ ಮೈ ರೋಮಾಂಚನವೆನಿಸುವಂತ್ತಿತ್ತು.

ಶಿವಪ್ಪ ಎಂಬ ಹಿರಿಯ ಕಂಚಾವೀರರು ಕಾಲಿನಲ್ಲಿ ಬಗಣಿ ಗೂಟವನ್ನು ಬಡಿದುಕೊಂಡು ಆ ರಂದ್ರದ ಮೂಲಕ ಹಗ್ಗ ಹಾಗೂ ಮುಳ್ಳಿನ ಕಂಟೆಯನ್ನು ದಾಟಿಸುವ ದೃಶ್ಯ ನೋಡುಗರ ಜಂಘಾಬಲವನ್ನು ಉಡುಗಿಸಿತು. ಈ ವೇಳೆ ನೆರೆದ ಸಹಾಸ್ರಾರು ಭಕ್ತರು ಏಳುಕೋಟಿಗೋ ಎಂದು ಹರ್ಷೋದ್ಘಾರ ಗೈದರು. ನಂತರ ಸರಪಳಿ ಬಾಬುದಾರರಾದ ಅನಿಲ್ ದಳವಾಯಿ ಮತ್ತು ಪ್ರಶಾಂತ ದಳವಾಯಿ ಇವರಿಂದ ದಪ್ಪನೆಯ ಕಬ್ಬಿಣದ ಸರಪಳಿಯನ್ನು ಕಟ್ಟೆಗೆ ಕಟ್ಟಿ ಒಂದೇ ಬಾರಿಗೆ ಜಗ್ಗಿ ಹರಿಯುವ ಕಾರ್ಯಕ್ರಮ ನಡೆಯಿತು. ಇದರೊಂದಿಗೆ ವಾರದಿಂದ ನಡೆದ ಮೈಲಾರ ಜಾತ್ರೆಗೆ ತೆರೆಬಿದ್ದಿತು. ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮಾಧಿಕಾರಿ ವೆಂಕಪ್ಪಯ್ಯ ಒಡೆಯರ್, ಧಾರ್ಮಿಕ ಧತ್ತಿ ಇಲಾಖೆಯ ಸಹಾಯಕ ಆಯುಕ್ತ ಎ.ಬಿ.ಪಿ ಮಹೇಶ, ಕಾರ್ಯನಿರ್ವಹಣಾಧಿಕಾರಿ ಹೆಚ್. ಹಾಲಪ್ಪ, ಸಿ.ಪಿ.ಐ ನಿಂಗನಗೌಡ ನೆಗಳೂರು, ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin