ವಿಜೃಂಭಣೆಯ ಶ್ರೀ ಗೋಣಿಬಸವೇಶ್ವರ ರಥೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

1

ಹೂವಿನಹಡಗಲಿ,ಫೆ.15- ತಾಲ್ಲೂಕಿನ ಕಂದ ಗಲ್ಲು ಗ್ರಾಮದಲ್ಲಿ ಶ್ರೀ ಗೋಣಿಬಸವೇಶ್ವರ ಸ್ವಾಮಿ ರಥೋತ್ಸವ ನಿನ್ನೆ ಸಂಜೆ ವಿಜೃಂಭಣೆಯಿಂದ ಜರುಗಿತು.ತುಂಗಭದ್ರೆಯ ತಟದಲ್ಲಿರುವ ಸುಕ್ಷೇತ್ರದಲ್ಲಿ ಮಕರ ಸಂಕ್ರಾಂತಿಯಂದು ಸಡಗರ, ಸಂಭ್ರಮದಿಂದ ಜರುಗಿದ ಸ್ವಾಮಿಯ ರಥೋತ್ಸವದಲ್ಲಿ ಹೂವಿನಹಡಗಲಿ, ನವಲಿ, ಕಾಗನೂರು, ಕೊಟ್ನಿಕಲ್ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳೊಂದಿಗೆ ಕರೆ ತರಲಾಯಿತು. ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ನಡೆದ ನಿಶಾನೆ ಹರಾಜಿನಲ್ಲಿ ಬೀರಣ್ಣನವರ್ ಫಕ್ಕೀರಪ್ಪ ಅವರು ರೂ. 20,101ಗಳಿಗೆ ಸ್ವಾಮಿಯ ನಿಶಾನೆ ಪಡೆದರು. ಸ್ವಾಮಿಯ ಹೂವಿನಹಾರವನ್ನು ಪುರದ ಕಾಗನೂರು ಶಿವಪ್ಪ ರೂ. 9,101ಗಳಿಗೆ ಪಡೆದರು.

ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರ ಜಯಘೋಷ, ಹರ್ಷೋದ್ಗಾರದ ನಡುವೆ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿಯನ್ನು ಸಮರ್ಪಿಸಿದರು. ಕೊಂಬಳಿ ಪ್ರಗತಿ ಗ್ರಾಮೀಣ ಬ್ಯಾಂಕಿನ ಮೇನೇಜರ್ ಜ್ಯೋತಿ ಪ್ರಕಾಶ, ಎಪಿಎಂಸಿ ಸದಸ್ಯ ಶಿವರಾಯನಗೌಡ, ಪುರದ ಪಿಕೆಎಂ ರೇಣುಕಸ್ವಾಮಿ, ಅಂಗಡಿ ಗೌರೀಶ್, ಇಟ್ಟಿಗಿ ಶಿವನಾಗಪ್ಪ, ಶಿವಯ್ಯ ಶಾಸ್ತರಿ, ಗ್ರಾಮದ ಸಮಸ್ತ ದೈವಸ್ತರು, ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin