ವಿಧಾನಸಭೆ ಚುನಾವಣೆಯಲ್ಲಿ ಸುಧಾಕರ್‍ಗೌಡಗೆ ಜೆಡಿಎಸ್ ಟಿಕೆಟ್ ನೀಡಲು ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

KILAR

ಕೋಲಾರ, ಫೆ.16- ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಛತ್ರಕೋಡಿಹಳ್ಳಿ ಸುಧಾಕರಗೌಡರಿಗೆ ಟಿಕೇಟ್ ನೀಡಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ಕಾರ್ಯಕರ್ತರು ಒತ್ತಾಯಿಸಿದ್ದಾರೆ.ನಿನ್ನೆ ನಡೆದ ಕೋಲಾರ ವಿಧಾನಸಭಾ ಕಾರ್ಯಕರ್ತರ ಸಭೆಯಲ್ಲಿ ಈ ಒತ್ತಾಯ ಕೇಳಿ ಬಂದಿತು.ಸುಧಾಕರಗೌಡ ತಮಗೆ ಟಿಕೇಟ್ ನೀಡುವಂತೆ ಕುಮಾರಸ್ವಾಮಿಯವರಲ್ಲಿ ಮನವಿ ಮಾಡಿದರು. ಕೋಲಾರ ವಿಧಾನಸಭಾ ಕ್ಷೇತ್ರ ಮೊದಲಿನಿಂದಲೂ ಜೆ.ಡಿ.ಎಸ್‍ನ ಭದ್ರಕೋಟೆ. ಆದರೆ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋಲಿಗೆ ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಕಾರಣವಾಗಿತ್ತು. ಈ ಬಾರಿ ಕಾರ್ಯಕರ್ತರು ಪಕ್ಷದಿಂದ ಹೊಸ ಯುವ ನಾಯಕತ್ವವನ್ನು ಬಯಸಿದ್ದಾರೆ.ಎ.ಪಿ.ಎಂ.ಸಿ.ಚುನಾವಣೆಯಲ್ಲಿ ಜೆ.ಡಿ.ಎಸ್ ಅಧಿಕಾರಕ್ಕೆ ಬರುವಂತೆ ಪಕ್ಷವನ್ನು ಸಂಘಟಿಸಿ ಚುನಾವಣೆಯನ್ನು ಗೆಲ್ಲಲಾಗಿದೆ. ತಳಮಟ್ಟದಿಂದಲೂ ಪಕ್ಷದ ಸಂಘಟನೆ ಮಾಡಿದ್ದೇವೆ. ಕೋಲಾರ ವಿಧಾನಸಭಾ ಮತದಾರರು ಹೊಸ ಮುಖ ಬಯಸಿದ್ದಾರೆ. ಅದರಂತೆ ಈ ಬಾರಿ ಮತದಾರರು ಪಕ್ಷದ ಕಾರ್ಯಕರ್ತರ ಮಾತಿಗೆ ಮನ್ನಣೆ ನೀಡುವಂತೆ ಮನವಿ ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin