ಹಾರ್ಡ್‍ವೇರ್ ಅಂಗಡಿಯೊಂದಕ್ಕೆ ಬೆಂಕಿ : ಲಕ್ಷಾಂತರ ರೂ. ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

malavali
ಮಳವಳ್ಳಿ, ಫೆ.16- ಹಾರ್ಡ್‍ವೇರ್ ಅಂಗಡಿಯೊಂದಕ್ಕೆ ಬೆಂಕಿ ಹತ್ತಿಕೊಂಡು ಲಕ್ಷಾಂತರ ರೂ ಮೌಲ್ಯದ ಕಬ್ಬಿಣ ಹಾಗೂ ಇನ್ನಿತರ ಸಾಮಾನುಗಳು ಸುಟ್ಟು ಬೂದಿಯಾಗಿರುವ ದುರ್ಘಟನೆ ಹಲಗೂರಿನಲ್ಲಿ ಜರುಗಿದೆ. ಹಲಗೂರಿನ ಮುಖ್ಯ ರಸ್ತೆಯ ಮಹದೇವಪ್ಪ ಹಾರ್ಡ್‍ವೇರ್‍ನಲ್ಲಿ ಈ ದುರ್ಘಟನೆ ಜರುಗಿದ್ದು , ಮುಂಜಾನೆ 2.30 ರ ಸಮಯದಲ್ಲಿ ಇದ್ದಕ್ಕಿದ್ದಂತೆ ಅಂಗಡಿಯಲ್ಲಿ ಬೆಂಕಿ ಹತ್ತಿಕೊಂಡು ಇಡೀ ಅಂಗಡಿಯನ್ನು ಕ್ಷಣಮಾತ್ರದಲ್ಲಿ ವ್ಯಾಪಿಸಿದೆ. ಜನರೆಲ್ಲಾ ಗಾಢ ನಿದ್ರೆಯಲ್ಲಿದ್ದು ಎಚ್ಚೆತ್ತುಕೊಂಡು ಹೊರಬರುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಅಂಗಡಿಯನ್ನು ಸುಟ್ಟು ಬೂದಿ ಮಾಡಿದೆ. ಲಕ್ಷಾಂತರ ರೂ. ಮೌಲ್ಯದ ಕಬ್ಬಿಣದ ಸಾಮಾನು ಹಾಗೂ ಇನ್ನಿತರ ಹಾರ್ಡ್‍ವೇರ್ ಸಾಮಾನು ಗಳು ಅಂಗಡಿಯ ಫರ್ನಿಚರ್‍ಗಳು ಬೆಂಕಿಗೆ ಸಂಪೂರ್ಣವಾಗಿ ಆಹುತಿಯಾಗಿದೆ. ಸುದ್ದಿ ತಿಳಿದ ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ಅಕ್ಕಪಕ್ಕ ಬೆಂಕಿ ಹರಡದಂತೆ ಹೆಚ್ಚಿನ ಅನಾಹುತ ತಪ್ಪಿಸಿದೆ. ವಿದ್ಯುತ್ ಶಾಕ್ ಷಕ್ರ್ಯೂಟ್‍ನಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬೆಂಕಿ ಅವಘಡದಲ್ಲಿ ಅಂಗಡಿ ಮಾಲೀಕರಿಗೆ ಸುಮಾರು 10 ಲಕ್ಷ ರೂ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಹಲಗೂರು ಪೊ ಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin