‘ಚಿನ್ನಮ್ಮ’ ಶಶಿಕಲಾ ಮೇಲೆ ಜೈಲಿನಲ್ಲಿ ಹಲ್ಲೆಯಾಗುವ ಭೀತಿ..!

ಈ ಸುದ್ದಿಯನ್ನು ಶೇರ್ ಮಾಡಿ

Sasikla-Jail

ಬೆಂಗಳೂರು, ಫೆ.17- ಅಕ್ರಮ ಆಸ್ತಿ ಪ್ರಕರಣದಡಿ ಜೈಲು ಸೇರಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಮೇಲೆ ಜೈಲಿನಲ್ಲಿ ಹಲ್ಲೆಯಾಗುವ ಭೀತಿ ಇರುವುದರಿಂದ ಅವರಿರುವ ಸೆಲ್‍ಗೆ ಬಿಗಿ ಭದ್ರತೆ ನೀಡಲಾಗಿದೆ.  ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದಂತೆ ಶಶಿಕಲಾ ವಿರುದ್ಧ ತಮಿಳರು ತೀವ್ರ ಆಕ್ರೋಶಗೊಂಡಿದ್ದು, ಇದೇ ಕಾರಣದಿಂದ ಜೈಲಿನಲ್ಲಿರುವ ತಮಿಳು ಕೈದಿಗಳು ಶಶಿಕಲಾ ಮೇಲೆ ಹಲ್ಲೆ ಮಾಡುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.  ಜೈಲಿನಲ್ಲಿರುವ ತಮಿಳು ಖೈದಿಗಳಿಂದ ಶಶಿಕಲಾ ಅವರಿಗೆ ಜೀವ ಬೆದರಿಕೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಇನ್ನು ನಿನ್ನೆ ಅವರ ಭೇಟಿಗೆ ಬಂದಿದ್ದ ಎಐಎಡಿಎಂಕೆ ನಾಯಕರು, ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ಭದ್ರತೆ ದೃಷ್ಟಿಯಿಂದ ಶಶಿಕಲಾ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ.

ಹೇಗಿತ್ತು ಶಶಿಕಲಾ ದಿನಚರಿ:

ಇಂದು ಮುಂಜಾನೆ 6 ಗಂಟೆಗೆ ಹಾಸಿಗೆಯಿಂದ ಎದ್ದ ಶಶಿಕಲಾ 6.30ರ ವರೆಗೆ ಯೋಗಾಭ್ಯಾಸ ನಡೆಸಿದರು. ಬಳಿಕ ಜೈಲಿನ ಮೆನುವಿನಂತೆ ಟೀ ಕುಡಿದು ಟೊಮ್ಯಾಟೋ ಬಾತ್ ಸೇವಿಸಿದರು. ಪಳನಿಸ್ವಾಮಿ ಭೇಟಿಗೆ ಕಾದು ಕುಳಿತಿದ್ದರು.   ಇನ್ನು ಪ್ರಸ್ತುತ ಶಶಿಕಲಾರನ್ನು ಇರಿಸಲಾಗಿರುವ ಪರಪ್ಪನ ಅಗ್ರಹಾರ ಜೈಲಿನ ಸೆಲ್ ಪಕ್ಕದಲ್ಲಿಯೇ ಸರಣಿ ಹಂತಕಿ ಸೈನೈಡ್ ಮಲ್ಲಿಕಾ ಸೆಲ್ ಕೂಡ ಇದೆ ಎಂದು ತಿಳಿದುಬಂದಿದೆ. ಈ ಹಿಂದೆ ಸೈನೈಡ್ ನೀಡಿ ಹಲವರನ್ನು ಕೊಂದು ಮಲ್ಲಿಕಾ ಅಲಿಯಾಸ್ ಸೈನೈಡ್ ಮಲ್ಲಿಕಾ ಶಿಕ್ಷೆಗೆ ಗುರಿಯಾಗಿದ್ದಾಳೆ. ಜೈಲು ಬದಲಾವಣೆಗೆ ಅಪರಾಧಿಗಳ ಮನವಿ: ತಮಗೆ ನೀಡಿರುವ ಸೆಲ್‍ಗಳನ್ನು ಬದಲಾವಣೆ ಮಾಡುವಂತೆ ಶಶಿಕಲಾ, ಇಳವರಸಿ ಮತ್ತು ಸುಧಕಾರನ್ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ. ಜೈಲಿನಲ್ಲಿ ಮೊದಲ ದಿನ ಮೂವರೂ ಸಹ ಸರಿಯಾಗಿ ನಿದ್ರೆ ಮಾಡಿರಲಿಲ್ಲವಂತೆ. ಶಶಿಕಲಾ ಜೈಲು ಅಧಿಕಾರಿಗಳು ನೀಡಿದ ಸಮವಸ್ತ್ರವನ್ನೂ ಕೂಡ ಧರಿಸಲಿಲ್ಲ. ಮಧ್ಯರಾತ್ರಿ ಇಳವರಿಸಿ ಬಲವಂತ ಮಾಡಿದ ಬಳಿಕ ಮೊಸರನ್ನ ಸೇವಿಸಿದರು ಎಂದು ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin