ಜನರ ಮನಗೆದ್ದ ‘ಬ್ಯುಟಿಫುಲ್ ಮನಸುಗಳು’

ಈ ಸುದ್ದಿಯನ್ನು ಶೇರ್ ಮಾಡಿ

7
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳು ಭಾರತ ದೇಶದ ಹೊರಗಡೆಯೂ ಬಿಡುಗಡೆಯಾಗುತ್ತಿರು ವುದು ಎಲ್ಲರಿಗೂ ತಿಳಿದಿರುವ ವಿಷಯ. ಬ್ಯುಟಿಫುಲ್ ಮನಸುಗಳು ನಮ್ಮ ರಾಜ್ಯದಲ್ಲಿ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿ ಈಗ ವಿದೇಶದಲ್ಲಿ ಕೂಡ ತನ್ನ ಪ್ರಭಾವವನ್ನು ಬೀರಲು ಸಂಚಾಗಿದೆ .ಅಲ್ಲಿನ ಕನ್ನಡಿಗರಿಗೆ ಈ ಸಿನಿಮಾ ತೋರಿಸಲು ಚಿತ್ರತಂಡ ಕೂಡ ಸಂಚಾಗಿದೆ . ಚಿತ್ರದ ನಿರ್ಮಾಪಕ ಪ್ರಸನ್ನ ಅವರೇ ಹೇಳುವಂತೆ ಯು-7 ಹಿಲ್ಸ್ ಮಿಡೀಯಾ ಸಂಸ್ಥೆಯ ಮಾಲೀಕ ವಿಜಯೇಂದ್ರ ಅವರು ಒಂದಷ್ಟು ಮುಂಗಡ ಹಣವನ್ನು ನೀಡಿ ಚಿತ್ರವನ್ನು ಅಲ್ಲಿನ ದೇಶಗಳಲ್ಲಿ ಬಿಡುಗಡೆ ಮಾಡುವುದೂ ಅಲ್ಲದೆ ಖಂಡಿತ ಲಾಭ ಬರುವುದು ಎಂದು ಹೇಳಿದ್ದಾರೆ. ವಿಜಿಯೇಂದ್ರ ಅವರೇ ಲೆಕ್ಕ ಕೊಡುವಂತೆ ಯುಎಸ್ ಒಂದರಲ್ಲೇ ಬಹಳಷ್ಟು ಕಡೆ ಪ್ರದರ್ಶನವಾಗುವ ಸಾಧ್ಯತೆಗಳು ಇವೆ. ಮಧ್ಯವರ್ತಿಗಳಿಗೆ ಅವಕಾಶ ಇಲ್ಲದೆ ಇರುವುದರಿಂದ ಮೋಸವಾಗುವುದು ಬಹಳ ಕಡಿಮೆ. ಮೊದಲ ಅನುಭವದಲ್ಲೆ ನಿರ್ಮಾಪಕರಿಗೆ ಖುಷಿ ಕೊಡುತ್ತೇನೆಂದು ಅವರು ಸಂಪೂರ್ಣ ಭರವಸೆಯಿಂದ ಹೇಳುತ್ತಾರೆ.

ಕಿರಿಕ್ ಪಾರ್ಟಿಯಂತೆ ನಮ್ಮ ಚಿತ್ರವೂ ಬಿಡುಗಡೆಯಾಗುತ್ತಿರುವುದು ಸಂತಸದ ವಿಷಯ. ಈ ಸಕ್ಸಸ್‍ಗೆ ಎಲ್ಲರೂ ಕಾರಣ ಎಂದು ನಾಯಕ ನಟ ನೀನಾಸಂ ಸತೀಶ್ ಹೇಳಿದರು.ಹೆಣ್ಣು ಮಕ್ಕಳು ನಂದಿನಿಯ ಪಾತ್ರವನ್ನು ಮೆಚ್ಚಿಕೊಂಡು, ಚಿತ್ರದಲ್ಲಿ ಬರುವ ಹಲವಾರು ಸನ್ನಿವೇಶಗಳು ನಮ್ಮೆಲ್ಲರ ಹೃದಯಕ್ಕೆ ಹತ್ತಿರವಾಗಿದೆ ಎಂದು ಹೇಳುವಾಗ ನಮಗೆ ಇದಕ್ಕಿಂತ ಬೇರೆ ಸೌಭಾಗ್ಯ ಬೇಕೇ ಎಂದು ಖುಷಿಯಿಂದ ಶೃತಿ ಹರಿಹರನ್ ಅವರು ಹೇಳಿದರು. ನಿರ್ದೇಶಕ ಜಯತೀರ್ಥ ಮಾತನಾಡುತ್ತ ತಮ್ಮ ಮುಂದಿನ ಚಿತ್ರ ವೆನಿಲಾ ಎಂದು ಪ್ರಕಟಿಸಿದರು.ಈಗ ಈ ಚಿತ್ರವು 25 ದಿನಗಳನ್ನು 20 ಕೇಂದ್ರಗಳಲ್ಲಿ ಪೂರೈಸಿದ್ದು, ನಿರ್ಮಾಪಕರಿಗೆ ಒಂದಷ್ಟು ಲಾಭವನ್ನು ಕೂಡ ತಂದುಕೊಟ್ಟಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin