ಟ್ರಂಪ್ ಆಡಳಿತಕ್ಕೆ ಮತ್ತೊಂದು ಪೆಟ್ಟು : ಭದ್ರತಾ ಸಲಹೆಗಾರರಾಗಲು ವೈಸ್ ಅಡ್ಮಿರಲ್ ನಕಾರ

ಈ ಸುದ್ದಿಯನ್ನು ಶೇರ್ ಮಾಡಿ

Trump--01
ವಾಷಿಂಗ್ಟನ್,ಫೆ.17-ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಲು ವೈಸ್ ಅಡ್ಮಿರಲ್(ನೌಕಾಪಡೆ ಉಪಮುಖ್ಯಸ್ಥ) ರಾಬರ್ಟ್ ಹಾರ್ ವರ್ಡ್ ನಿರಾಕರಿಸಿದ್ದಾರೆ. ಇದರಿಂದಾಗಿ ಸಮರ್ಥ ವ್ಯಕ್ತಿಯ ಶೋಧದಲ್ಲಿರುವ ಟ್ರಂಪ್ ಆಡಳಿತಕ್ಕೆ ಮತ್ತೊಂದು ಪೆಟ್ಟು ಬಿದ್ದಂತಾಗಿದೆ. ಇದೇ ವೇಳೆ ಇಷ್ಟೆಲ್ಲ ಗೊಂದಲ- ಬಿಕ್ಕಟ್ಟುಗಳಿದ್ದರೂ ತಮ್ಮ ಆಡಳಿ ತವು ಅತ್ಯಂತ ಸುಸ್ಥಿತಿಯಲ್ಲಿರುವ ಯಂತ್ರ ದಂತೆ ನಡೆಯುತ್ತಿದೆ ಎಂದು ಟ್ರಂಪ್ ನಗೆಪಾಟಲಿಗೆ ಗುರಿಯಾಗಿದ್ದಾರೆ.   ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಗುವಂತೆ ಟ್ರಂಪ್ ನೀಡಿದ ಪ್ರಸ್ತಾವನೆ ಯನ್ನು ಸೌಜನ್ಯವಾಗಿಯೇ ತಿರಸ್ಕರಿಸಿರುವ ರಾಬರ್ಟ್, ಅಮೆರಿಕ ಸರ್ಕಾರವು ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ತಮ್ಮ ಅಗತ್ಯತೆಗಳನ್ನು ಪೂರ್ಣವಾಗಿ ಈಡೇರಿಸಿದೆ. ಹೀಗಾಗಿ ಈಗಿನ ಹುದ್ದೆ ತಮಗೆ ತೃಪ್ತಿ ನೀಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ತಮ್ಮ ಆಡಳಿತದಲ್ಲಿ ಯಾವುದೇ ಗೊಂದಲ ಗಲಿಬಿಲಿ ಇಲ್ಲ ಎಂದು ಹೇಳಿರುವ ಟ್ರಂಪ್, ಈ ಬಗ್ಗೆ ಮಾಧ್ಯಮಗಳು ನಮ್ಮ ಮೇಲೆ ದಾಳಿ ನಡೆಸಲು ಯತ್ನಿಸುತ್ತಿವೆ ಎಂದು ಟೀಕಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin