ಮಹದೇವಪ್ಪರನ್ನು ಸಿಎಂ ಸಿದ್ದರಾಮಯ್ಯ ಗುಲಾಮನಂತೆ ಬಳಸಿಕೊಳ್ಳುತ್ತಿದ್ದಾರೆ : ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

srinivas-prasad
ಮೈಸೂರು, ಫೆ.17- ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪನನ್ನು ಮುಖ್ಯಮಂತ್ರಿಗಳು ಗುಲಾಮನಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.  ಒಡನಾಡಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳ ಲಾಗಿದ್ದ ಕಾರ್ಯ ಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನ ಉಳಿಸಿಕೊಳ್ಳಲು ಮಹದೇವಪ್ಪ ಅವರನ್ನು ಕಪ್ಪ ಸಂಗ್ರಹಿಸಲು ಬಿಟ್ಟಿದ್ದಾರೆ. ನಾನೂ ಒಬ್ಬ ದಲಿತನಾಗಿದ್ದು, ನನ್ನನ್ನು ಪಕ್ಷದಿಂದ ಏಕಾಏಕಿ ಕೈ ಬಿಡಲಾಗಿದೆ. ಖರ್ಗೆ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬಹುದಿತ್ತು. ಆದರೆ, ಆ ಸ್ಥಾನ ತಪ್ಪಿಸಲು ಅವರನ್ನು ಸೋಲಿಸ ಲಾಯಿತು. ಮುಖ್ಯ ಮಂತ್ರಿ ಸಿದ್ದರಾಮಯ್ಯ ದಲಿತರನ್ನು ತುಳಿಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಗಂಭೀರ ದೂರಿದರು.

ಪಕ್ಷದಲ್ಲಿನ ಅವಮಾನದಿಂದ ಬೇಸತ್ತ ನಾನೂ ಮತ್ತು ಎಸ್.ಎಂ.ಕೃಷ್ಣ ಅವರು ಅಲ್ಲಿಂದ ಹೊರ ಬರುವ ಕಾಲ ಸನ್ನಿಹಿತವಾಯಿತು. ಈ ಹಿಂದೆ ನೀಡದೇ ಇರುವಷ್ಟು ಕಪ್ಪವನ್ನು ಹೈಕಮಾಂಡ್‍ಗೆ ನೀಡಲು ಮಹದೇವಪ್ಪ ಅವರನ್ನು ಮುಖ್ಯ ಮಂತ್ರಿ ಬಳಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳ ಗುಲಾಮನಂತೆ ಸ್ವಾಭಿಮಾನ ಬಿಟ್ಟು ಮಹದೇವಪ್ಪ ನಡೆದುಕೊಳ್ಳುತ್ತಿದ್ದಾರ ಎಂದು ದೂರಿದರು.  ಕಾಂಗ್ರೆಸ್‍ನಲ್ಲಿ ರಾಹುಲ್  ಗಾಂಯ ನಾಯಕತ್ವ ಮುಂದುವರೆದರೆ ಪಕ್ಷ ನಿರ್ನಾಮವಾಗಲಿದೆ ಎಂದು ಮಾಜಿ ಸಚಿವ ಶ್ರೀನಿವಾಸ್‍ಪ್ರಸಾದ್ ಇಂದಿಲ್ಲಿ ಹೇಳಿದರು.  ರಾಹುಲ್‍ಗಾಂ ಎಲ್ಲಿಯ ವರೆಗೂ ಪಕ್ಷದಲ್ಲಿ ನಾಯಕತ್ವ ವಹಿಸಿರುತ್ತಾರೋ ಅಲ್ಲಿಯವರೆಗೆ ಕಾಂಗ್ರೆಸ್ ಮುಂದುವರಿಯುವುದಿಲ್ಲ. ಇತಿಹಾಸವಿರುವ ಕಾಂಗ್ರೆಸ್ ಪಕ್ಷದಲ್ಲಿ ಅಖಿಲೇಶ್ ಯಾದವ್ ಅಂತಹವರೊಂದಿಗೆ ಒಪ್ಪಂದ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿರುವುದೇ ಕಾಂಗ್ರೆಸ್‍ನ ಸ್ಥಿತಿಯನ್ನು ತೋರಿಸುತ್ತದೆ ಎಂದರು.  ಬಿಜೆಪಿ ದಲಿತರನ್ನು ಹಣಿಯುತ್ತಿದೆ ಎಂದು ಆರೋಪ ಮಾಡಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಪಕ್ಷವೇ ಈ ಕೆಲಸದಲ್ಲಿ ತೊಡಗಿದೆ.   ಪಕ್ಷದ ನಾಯಕರಾದ ಸೋನಿಯಾಗಾಂ ಹಾಗೂ ರಾಹುಲ್‍ಗಾಂ ಅವರಿಗೆ ಎಲ್ಲಾ ವಿಷಯವನ್ನು ತಿಳಿಸದೆ ತಿರುಚಿ ತಮ್ಮ ಅನುಕೂಲಕ್ಕೆ ತಕ್ಕಂತೆ ದಿಗ್ವಿಜಯ್‍ಸಿಂಗ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ ಎಂದು ದೂರಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin