ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಬಂಧ ಮಂಡಿಸಿದ ಕಿರಣ್

ಈ ಸುದ್ದಿಯನ್ನು ಶೇರ್ ಮಾಡಿ

kiran

ಕನಕಪುರ, ಫೆ.18- ಇತ್ತೀಚೆಗೆ ಥೈಲ್ಯಾಂಡ್‍ನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕೀರಣದಲ್ಲಿ ಭಾಗವಹಿಸಿ ಪ್ರಬಂದವನ್ನು ಮಂಡಿಸಿರುವ ಎಸ್.ಕಿರಣ್ ರಾವತ್ ಕನಕಪುರದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ. ಕಿರಣ್ ಕುವೆಂಪು ನಗರದ ನಿವಾಸಿಗಳಾದ ಶಾಮಲ ಹಾಗು ದಿ.ಶ್ರೀನಿವಾಸ್ ರಾವತ್ ಅವರ ಒಬ್ಬನೇ ಮಗನಾಗಿದ್ದು, ಬಾಲ್ಯದಿಂದ ಆತನಲ್ಲಿ ಏನೋ ಒಂದು ವಿಶೇಷ ಹಂಬಲ ಹಾಗು ಏನನ್ನಾದರು ಸಾದಿಸುವ ಚಲ ಗೋಚರಿಸುತ್ತಿತ್ತು, ಇಲ್ಲಿನ ಆರ್‍ಇಎಸ್ ಸಂಸ್ಥೆಯಲ್ಲಿ ಪದವಿವರೆವಿಗೂ ನಮ್ಮೊಂದಿಗೆಯೇ ಶಿಕ್ಷಣ ಪೂರೈಸಿ ನಂತರ ಬೆಂಗಳೂರು ವಿವಿಯಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆದು, ಪ್ರಸ್ತುತ ಹೊಳೆ ನರಸೀಪುರದ ಸರ್ಕಾರಿ ಪದವಿ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಈ ವರೆವಿಗೂ ಹಲವಾರು ಪ್ರಭಂದಗಳನ್ನು ಮಂಡಿಸಿದ್ದಾರೆ ಎಂದು ಸ್ನೇಹಿತ ನಾಗರಾಜು ಹೇಳಿದರು.

ಥೈಲ್ಯಾಂಡ್‍ನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕೀರಣದಲ್ಲಿ ಕರ್ನಾಟಕದಿಂದ ಆಯ್ಕಗೊಂಡ ಒಟ್ಟು ಏಳು ಮಂದಿಯಲ್ಲಿ ಕಿರಣ್ ರಾವತ್ ಭಾಗವಹಿಸಿ ದಿ ಅಂಡರ್ ಸ್ಟಾಂಡಿಂಗ್ ಅಂಡ್ ಮ್ಯಾನೇಜ್‍ಮೆಂಟ್ ಆಫ್ ಕಾನ್‍ಪ್ಲಿಕ್ಟ್ ಇನ್ ಸ್ಪೋಟ್ರ್ಸ್ ಎಂಬ ವಿಷಯವಾಗಿ ಪ್ರಭಂದವನ್ನು ಮಂಡಿಸುವ ಮೂಲಕ ಕನಕಪುರ ತಾಲ್ಲೂಕಿನ ಜನತೆಯೇ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಹೇಳಿದರು.ಅವರ ಸ್ನೇಹ ಬಳಗದ ಮಹೇಶ್ ಕುಮಾರ್, ರವಿ, ಸುಮ, ಚೈತನ್ಯ, ಲಾಯರ್ ಮಹೇಶ್, ವನಿತ ಮತ್ತು ಮಂಜುಳ ಸೇರಿದಂತೆ ಇನ್ನು ಅನೇಕರು ಕಿರಣ್‍ರಾವತ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin