ಅಕ್ರಮ ಕಲ್ಲುಗಣಿಗಾರಿಕೆಯನ್ನು ಕೂಡಲೇ ಸ್ಥಗಿತಗೊಳಿಸಲು ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

turvekere65

ತುರುವೇಕೆರೆ, ಫೆ.17- ತಾಲೂಕಿನ ಮಾಯಸಂದ್ರ ಹೋಬಳಿಯ ನಾಗೇಗೌಡನ ಬ್ಯಾಲದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ ಒತ್ತಾಯಿಸಿದ್ದಾರೆ.ರೈತರ ಮನವಿ ಮೇರೆಗೆ ತಾಲೂಕಿನ ಮಾಯಸಂದ್ರ ಹೋಬಳಿಯ ನಾಗೇಗೌಡನ ಬ್ಯಾಲದ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಅರಣ್ಯಪ್ರದೇಶಕ್ಕೆ ಹೊಂದಿಕೊಂಡಂತೆ 4 ಎಕರೆ ಪ್ರದೇಶದಲ್ಲಿ ಬೃಹತ್ತಾದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸುಮಾರು 8 ತಿಂಗಳುಗಳಿಂದ ನಡೆಸುತ್ತಿರುವ ಗಣಿಗಾರಿಕೆ ಜಲ್ಲಿ, ಎಂಸ್ಟಾಂಡ್, ಜಲ್ಲಿ ಪುಡಿ ಮಾಡಲು ಬೃಹತ್ ಸ್ಫೋಟಕಗಳನ್ನು ಗಣಿಗಾರಿಕೆಗೆ ಉಪಯೋಗಿಸುವುದರಿಂದ ಭೂಮಿ ಕಂಪಿಸಿ ಸುತ್ತಮುತ್ತಲ ಗ್ರಾಮಗಳ ಮನೆಗಳ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದರು.ಅಕ್ಕ ಪಕ್ಕದ ರೈತರ ಬೋರ್ವೆಲ್ ಕುಸಿದು ಮೋಟಾರು ಪಂಪ್ ಗಳು ಕೊಳವೆ ಭಾವಿಗಳ ಮಧ್ಯದಲ್ಲೇ  ಸಿಲುಕಿಕೊಳ್ಳುತ್ತಿವೆ. ಈ ಪ್ರದೇಶದಲ್ಲಿ ಸುಮಾರು 200 ಟಿಪ್ಪರ್ಗಳು, 20 ಇಟಾಚಿ, 2 ಜಲ್ಲಿ ಕ್ರಷ್ಷರ್, ಸಿಮೆಂಟ್ ಮಿಕ್ಸರ್ ಸೇರಿದಂತೆ ಕೆಲಸ ಮಾಡುತ್ತಿದ್ದು, ಗಣಿಗಾರಿಕೆ ಧೂಳಿನಿಂದ ಪರಿಸರ ಹಾಳಾಗುತ್ತಿದ್ದು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ ಎಂದರು.

ಪರವಾನಿಗೆ ಇಲ್ಲದೆ ಗಣಿಗಾರಿಕೆ:

ಈ ಸ್ಥಳದಲ್ಲಿ ಗಣಿಗಾರಿಕೆ ಮಾಡಲು ಯಾವ ಇಲಾಖೆಗಳು ಪರವಾನಿಗೆಯಾಗಲಿ ಅಥವಾ ಅನುಮತಿಯನ್ನು ನೀಡಿಲ್ಲ. ಆದರೆ, ಸ್ಥಳೀಯ ಗ್ರಾಮ ಪಂಚಾಯ್ತಿ ಪಿಡಿಒ ಮಾತ್ರ ಗಣಿಗಾರಿಗೆ ಸ್ಥಳದಿಂದ 18 ಕಿ.ಮೀ.ವರೆಗೆ ಯಾವುದೇ ಗ್ರಾಮಗಳಿಲ್ಲ ಎಂದು ಅಕ್ರಮವಾಗಿ ಗಣಿಗಾರಿಕೆ ಅನುಮತಿ ಪತ್ರ ನೀಡಿದ್ದು, ಆದರೆ ಸ್ಥಳದಿಂದ ಕೇವಲ ಅರ್ಧ ಕಿ.ಮೀ.ಗೊಂದು ಗ್ರಾಮಗಳಿವೆ ಕೂಡಲೇ ಪಿಡಿಒ ಅವರನ್ನು ವಜಾ ಮಾಡಬೇಕು ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸಬೇಕು ಇಲ್ಲವಾದರೆ ರೈತರೊಂದಿಗೆ ಉಘ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ರಹಮತ್ ಹುಲ್ಲಾ, ರಾಜಣ್ಣ, ಜಾಫರ್, ಪುನೀತ್, ಸುನಿಲ್, ಸ್ಥಳಿಯರಾದ ಯುಗಂತ್ ಕುಮಾರ್, ನವೀನ್, ಶೇಖರ್, ಜವರೇಗೌಡ, ಕುಮಾರ್, ಚೇತನ್, ಲೋಕೇಶ್ ಮತ್ತಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin