ಆಹಾರ ತಯಾರಿಕಾ ಘಟಕದಲ್ಲಿ ಮಾಫಿಯಾ : ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

beluru-2
ಬೇಲೂರು, ಫೆ.18- ತಾಲೂಕಿನ ನಿಡಗೋಡು ಸಮೀಪವಿರುವ ಮಹಿಳಾ ಮತ್ತು ಮಕ್ಕಳ ಪೂರಕ ಪೌಷ್ಠಿಕ ಅಹಾರ ತರಬೇತಿ ಮತ್ತು ತಯಾರಿಕ ಘಟಕದ ಅವ್ಯವಸ್ಥೆಯಲ್ಲಿ ದೊಡ್ಡ ಮಾಫಿಯಾದ ಕೈವಾಡವಿದೆ ಎಂದು ತಾಪಂ ಅಧ್ಯಕ್ಷ ತಮ್ಮಣ್ಣಗೌಡ ಆರೋಪಿಸಿದರು.ತಾಪಂ ಸಂಭಾಗಣದಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಪೌಷ್ಠಿಕ ಆಹಾರ ನೀಡುವ ಎಂಎಸ್‍ಪಿಟಿಸಿ ಶುಚಿತ್ವ ಕಾಪಾಡುತ್ತಿಲ್ಲ ಹಾಗೂ ಗುಣಮಟ್ಟದ ಅಹಾರ ಪದಾರ್ಥಗಳನ್ನು ನೀಡದೆ ತೂಕದಲ್ಲಿ ಮೋಸವೆಸಗುತಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಆರೋಪಕ್ಕೆ ಸಾಕ್ಷಿಗಳು ದೊರೆತಿದ್ದರಿಂದ ಸಂಸ್ಥೆಗೆ ವಿತರಿಸಬೇಕಿದ್ದ 19 ಲಕ್ಷ ರೂ.ಮೊತ್ತದ ಬಿಲ್ ತಡೆ ಹಿಡಿಯಲಾಗಿತ್ತು ಎಂದರು.

ಈ ಸಂಸ್ಥೆಯಲ್ಲಿನ ಹಗರಣಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗಿದ್ದು, ಪೌಷ್ಠಿಕ ಅಹಾರ ತರಬೇತಿ ಮತ್ತು ತಯಾರಿಕ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘವನ್ನು ರದ್ದುಪಡಿಸಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಪತ್ರ ಕಳುಹಿಸಿ ಕೊಡಲಾಗುವುದು ಎಂದರು.ತಾಲೂಕಿನ 67 ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಎರಡು-ಮೂರು ಮಕ್ಕಳಿದ್ದರೂ ಹದಿನೈದು, ಹದಿನಾರು ಮಕ್ಕಳಿವೆ ಎಂದು ದಾಖಲೆ ತೊರಿಸುತ್ತಾರೆ. ಅಲ್ಲದೆ, ಅಂಗನವಾಡಿ ಕೇಂದ್ರಗಳಿಗೆ ಬರುವ ಆಹಾರವನ್ನು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದಾರೆ ಹಾಗೂ ನಾಗೇನಹಳ್ಳಿಯ ಅಂಗನವಾಡಿ ಶಿಕ್ಷಕಿಯೊಬ್ಬರು ಕೆಲಸಕ್ಕೆ ಬಾರದೆ ಸಂಬಳ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ತಕ್ಷಣವೆ ಆ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ತಾಪಂ ಸದಸ್ಯ ಹರೀಶ್ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಪೂರಕ ಪೌಷ್ಠಿಕ ಅಹಾರ ತರಬೇತಿ ಮತ್ತು ತಯಾರಿಕಾ ಘಟಕದವರು ನಮಗೆ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಅಶುಚಿತ್ವದ ಆಹಾರ ನೀಡಿ ಮಕ್ಕಳ ಹಕ್ಕಿಗೆ ಧಕ್ಕೆ ತಂದು ಅಪರಾಧವೆಸಗಿದ್ದಾರೆ. ಈ ಅವ್ಯವಸ್ಥೆಗೆ ಅಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ ಎಂದರು ತಾಪಂ ಸದಸ್ಯರಾದ ರಂಗೇಗೌಡ. ರವಿ, ಸುಮ, ಎಂಎಸ್‍ಪಿಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘದ ಅಧ್ಯಕ್ಷೆ ಕಮಲಾ, ಖಜಾಂಚಿ  ಭಾಗ್ಯ, ಸದಸ್ಯರಾದ ಹೇಮಾವತಿ, ಚಂದ್ರಕಲಾ ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin