ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-02-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ದೇವಮಾಯೆಯಿಂದ ವಿಮೋಹಿತನಾದ ಪುರುಷನು ನರಕದಲ್ಲಿದ್ದರೂ ಸುಖಲೇಶವಿದ್ದರೆ ತನ್ನ ದೇಹವನ್ನು ಬಿಡಲಿಚ್ಛಿಸುವುದಿಲ್ಲ. – ಪಂಚತಂತ್ರ, ಮಿತ್ರಭೇದ

Rashi

ಪಂಚಾಂಗ : ಶನಿವಾರ, 18.02.2017

ಸೂರ್ಯ ಉದಯ ಬೆ.6.41 / ಸೂರ್ಯ ಅಸ್ತ  ಸಂ.6.26
ಚಂದ್ರ ಉದಯ  ರಾ.12.35 / ಚಂದ್ರ ಅಸ್ತ ಬೆ.11.44
ದುರ್ಮುಖಿ ಸಂವತ್ಸರ / ಉತ್ತರಾಯಣ  / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಸಪ್ತಮಿ (ಬೆ.11.48)
ನಕ್ಷತ್ರ: ವಿಶಾಖ (ರಾ.7.10) / ಯೋಗ: ಧ್ರುವ  (ರಾ.8.25) / ಕರಣ: ಭವ-ಬಾಲವ (ಬೆ.11.48-ರಾ.1.03)
ಮಳೆ ನಕ್ಷತ್ರ:ಧನಿಷ್ಠಾ / ಮಾಸ: ಕುಂಭ / ತೇದಿ: 7

ರಾಶಿ ಭವಿಷ್ಯ :

ಮೇಷ : ಆಗಾಗ ಮಾನಸಿಕ ಅಸ್ಥಿರತೆ ಕಾಡಬಹುದು, ಗೃಹ ದಲ್ಲಿ ಮಕ್ಕಳೊಂದಿಗೆ ಅನಾವಶ್ಯಕ ಕಲಹ ಉಂಟಾಗಬಹುದು
ವೃಷಭ : ಹಿಡಿದ ಕೆಲಸ-ಕಾರ್ಯಗಳಲ್ಲಿ ಅಡೆತಡೆಗಳು ತೋರಿಬಂದು ವಿಳಂಬವಾಗಲಿವೆ, ಸಂತಾನದ ಬಗ್ಗೆ ಜಾಗ್ರತೆ
ಮಿಥುನ: ನಿರುದ್ಯೋಗಿಗಳಿಗೆ ಅವಕಾಶಗಳು ಒದಗಿಬರಲಿವೆ
ಕಟಕ : ವ್ಯಾಪಾರ- ವ್ಯವಹಾರ ಗಳಲ್ಲಿ ಚೇತರಿಕೆ ಕಂಡುಬರುತ್ತದೆ
ಸಿಂಹ: ಶತ್ರುಗಳು ಪಲಾಯನಗೊಳ್ಳು ವರು, ಸಾಂಸಾರಿಕವಾಗಿ ನೆಮ್ಮದಿ ಸಿಗಲಿದೆ
ಕನ್ಯಾ: ಆಗಾಗ ಧನ ಸಂಗ್ರಹಕ್ಕೆ ಅನುಕೂಲಕರ ವಾತಾವರಣ
ತುಲಾ: ಅವಿವಾಹಿತರಿಗೆ ವಿವಾಹ ಯೋಗ್ಯ ಸಂಬಂಧಗಳು ಪೂರಕವಾಗಲಿವೆ
ವೃಶ್ಚಿಕ : ಕಾರ್ಯರಂಗದಲ್ಲಿ ಶತ್ರುಗಳ ಉಪಟಳ ಹೆಚ್ಚಲಿದೆ
ಧನುಸ್ಸು: ಸಾಂಸಾರಿಕವಾಗಿ ಖರ್ಚು ಹೆಚ್ಚಲಿದೆ, ಕಲಹಕ್ಕೆ ದಾರಿ ಮಾಡಿಕೊಳ್ಳಬೇಡಿ
ಮಕರ: ವಾದ-ವಿವಾದಗಳಿಂದ ದೂರವಿರಬೇಕು, ಅಧಿಕ ಖರ್ಚಿನಿಂದ ಆತಂಕಕ್ಕೊಳಗಾಗುವಿರಿ
ಕುಂಭ: ಗ್ರಹಿಸಿದ ಕೆಲಸ-ಕಾರ್ಯಗಳು ನೆರವೇರುತ್ತವೆ
ಮೀನ: ಧನಾದಾಯ ಉತ್ತಮ, ಎಲ್ಲದರಲ್ಲೂ ಸಮರ್ಥರಾಗುವಿರಿ, ನವದಂಪತಿಗಳಿಗೆ ಸಂತಾನಭಾಗ್ಯ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin