ಕಳ್ಳರ ಹಾವಳಿ ಹೆಚ್ಚಾಗಿದ್ದು, ಮನೆ, ಅಂಗಡಿ, ಕಚೇರಿ, ವಾಹನಗಳನ್ನು ಮಧ್ಯರಾತ್ರಿ ವೇಳೆ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

ಕೆಜಿಎಫ್, ಫೆ.18- ರಾಬರ್ಟ್‍ಸನ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿ ಸೇರಿದಂತೆ ನಗರದ ಇತರೆ ಬಡಾವಣೆಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ದಿನನಿತ್ಯ ಮನೆ, ಅಂಗಡಿ, ಕಚೇರಿ, ವಾಹನಗಳನ್ನು ಮಧ್ಯರಾತ್ರಿ ವೇಳೆ ಕಳವು ಮಾಡುತ್ತಿರುವ ಪುಡಾರಿ ಕಳ್ಳರ ಕೈಚಳಕದಿಂದ ಸಾರ್ವಜನಿಕರು ಭಯಪಡುವಂತಾಗಿದೆ.ಕಳ್ಳರನ್ನು ಹಿಡಿಯಲು ಪೊಲೀಸರು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಕಳೆದ ಹತ್ತಾರು ದಿನಗಳಿಂದ ಶಿವರಾಜ್‍ನಗರ, ಸುಮತಿನಗರ, ಸಲ್ಡಾನ ವೃತ್ತ, ಇರುದಯಪುರಂ, ಪೈಪ್‍ಲೈನ್ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಕಳ್ಳರು ನಿರಂತರವಾಗಿ ಮನೆ ದೋಚುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ಇದ್ದರು ರಾತ್ರಿ ವೇಳೆ ಗಸ್ತು ತಿರುಗುವ ಪೊಲೀಸ್ ಸಿಬ್ಬಂದಿಗಳು ರಸ್ತೆಬಿಟ್ಟು ಮನೆಗಳ ಮೇಲೂ ಕಣ್ಣಾಯಿಸಬೇಕು ಎಂದು ಸಾರ್ವಜನಿಕರು ಆಗ್ರಿಸಿದ್ದಾರೆ.ಒಂದೇ ರಾತ್ರಿಯಲ್ಲಿ ವಿವಿಧ ಬಡಾವಣೆಗಳಲ್ಲಿ ಮನೆ, ಅಂಗಡಿ ಹಾಗೂ ಕಚೇರಿಗಳಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.ಇನ್ನಾದರೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಚ್ಚೆತ್ತುಕೊಂಡು ಕಳ್ಳರ ಗ್ಯಾಂಗ್‍ನ್ನು ಬಂಧಿಸಲು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಮತ್ತು ಜನರಲ್ಲಿ ಮೂಡಿರುವ ಭೀತಿಯನ್ನು ಹೋಗಲಾಡಿಸಬೇಕು ಎಂಬುದು ಇಲ್ಲಿನ ಸಾರ್ವಜನಿಕರ ಮನವಿಯಾಗಿದೆ.

ಕಾಲೇಜು ಕೊಠಡಿಗಳ ಬೀಗ ಮುರಿದು ಕಳವು:

ನಗರದ ಬಿ.ಎಂ.ರಸ್ತೆಯಲ್ಲಿರುವ ಫರ್‍ಫೆಕ್ಟ್ ಕರೆಸ್ಪಾಂಡೆನ್ಸ್ ಕಾಲೇಜಿನ ನಾಲ್ಕು ಕೊಠಡಿಗಳ ಬೀಗ ಮುರಿದ ಕಳ್ಳರು ಕಳ್ಳತನ ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ಕಾಲೇಜಿನಲ್ಲಿಟ್ಟಿದ್ದ 28,000 ನಗದು ಮತ್ತು 30 ಸಾವಿರ ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ಅಪಹರಣ ಮಾಡಲಾಗಿದೆ. ಅಪರಾಧ ವಿಭಾಗದ ಸಬ್ ಇನ್ಸ್‍ಪೆಕ್ಟರ್ ವೆಂಕಟಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin