ಮುಂಬೈ ದಾಳಿ ರೂವಾರಿ ಹಫೀಜ್’ನನ್ನ ಭಯೋತ್ಪಾದಕ ಪಟ್ಟಿಗೆ ಸೇರಿಸಿದ ಪಂಜಾಬ್ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Hafeez-Syeed

ಇಸ್ಲಾಮಾಬಾದ್, ಫೆ.18- ಪಾಕಿಸ್ತಾನದ ಪಂಜಾಬ್ ಪ್ರಾದೇಶಿಕ ಸರ್ಕಾರವು ಭಯೋತ್ಪಾದನಾ ನಿಗ್ರಹ ದಳದ ಕಾಯ್ದೆಯಡಿ ಮುಂಬೈ ದಾಳಿಯ ರೂವಾರಿ ಮತ್ತು ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಹೆಸರನ್ನು ಭಯೋತ್ಪಾದಕರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ.  ಹಫೀಜ್ ಸಹೀದ್ ಮತ್ತು ಅವನ ಸಹಚರರಾದ ಕಾಜಿ ಖಾಸಿಫ್ ಹಾಗೂ ಜಫಾರ್ ಇಕ್ಬಾಲ್ ಎಂಬುವರನ್ನು ಕೂಡ ಭಯೋತ್ಪಾದಕ ಪಟ್ಟಿಯಲ್ಲಿ ಸೇರಿಸಿದೆ ಎಂದು ಇಲ್ಲಿನ ಡಾನ್ ಪತ್ರಿಕೆ ವರದಿ ಮಾಡಿದೆ. ಮುಂಬೈನಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಹಫೀಜ್ ಸಯೀದ್ ಪಾತ್ರ ಪ್ರಮುಖವಾಗಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿತ್ತು. ಆದರೆ, ಈವರೆಗೂ ಪಾಕಿಸ್ತಾನವು ಈ ದಾಳಿಯಲ್ಲಿ ಹಫೀಜ್ ಪಾತ್ರ ಇಲ್ಲ ಎಂದೇ ವಾದಿಸುತ್ತ ಬಂದಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin