SBM ಬ್ಯಾಂಕನ್ನು SBI ಜೊತೆ ವಿಲೀನ ಮಾಡಬಾರದೆಂದು ವಾಟಾಳ್ ತಮಟೆ ಚಳವಳಿ

ಈ ಸುದ್ದಿಯನ್ನು ಶೇರ್ ಮಾಡಿ

SBI-01

ಬೆಂಗಳೂರು, ಫೆ.18-ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಯಾವುದೇ ಕಾರಣಕ್ಕೂ ಯಾವುದೇ ಬ್ಯಾಂಕ್‍ನೊಂದಿಗೆ ವಿಲೀನ ಮಾಡಬಾರದು. ಐತಿಹಾಸಿಕ ಪ್ರಸಿದ್ದವಾದ ಮೈಸೂರು ಬ್ಯಾಂಕ್‍ನ್ನು, ಮೈಸೂರಿನ ಹೆಸರನ್ನು ಉಳಿಸಿ ಬೆಳೆಸಬೇಕೆಂದು ಆಗ್ರಹಿಸಿ ಎಸ್‍ಬಿಎಂ ವೃತ್ತದಲ್ಲಿ ವಾಟಾಳ್ ನಾಗರಾಜ್ ತಮಟೆ ಚಳವಳಿ ನಡೆಸಿದರು.  ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಸ್ಟೇಟ್ ಬ್ಯಾಂಕ್ ಇಂಡಿಯಾ ಜೊತೆಯಲ್ಲಿ ವಿಲೀನ ಮಾಡಲು ಎಲ್ಲಾ ಸಿದ್ಧತೆಗಳು ನಡೆದಿವೆ. ಮೈಸೂರು ಹೆಸರನ್ನು ಬಿಟ್ಟುಕೊಡಲುಸ ಸಾಧ್ಯವಿಲ್ಲ. ಈ ಹೆಸರು ಬದಲಾದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮೈಸೂರು ಬ್ಯಾಂಕ್‍ಗೆ 104 ವರ್ಷಗಳ ಇತಿಹಾಸವಿದೆ. ಸರ್.ಎಂ.ವಿಶ್ವೇಶ್ವರಯ್ಯನವರ ಕಾಲದಲ್ಲಿ ಆರಂಭವಾದ ಮೈಸೂರು ಬ್ಯಾಂಕ್‍ನಲ್ಲಿ ಜನರು ಠೇವಣಿ ಹಣ ಇಟ್ಟು ಜನರು ಬ್ಯಾಂಕನ್ನು ಕಟ್ಟಿ ಬೆಳೆಸಿದ್ದಾರೆ. ಇಂತಹ ಐತಿಹಾಸಿಕವಾದ ಬ್ಯಾಂಕನ್ನು ಬೇರ್ಪಡಿಸುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಹಣ ಕಾಸು ಸಚಿವ ಅರುಣ್ ಜೇಟ್ಲಿ ಜೊತೆ ಚರ್ಚಿಸಿ ಕ್ರಮಕೈಗೊಳ್ಳಬೇಕು.

ಸಂಸದರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಹಣಕಾಸು ಸಚಿವರ ಜೊತೆ ಚರ್ಚಿಸಬೇಕು ಎಂದು ಮೈಸೂರು ಸ್ಯಾಂಡಲ್ ಓಪು, ಮೈಸೂರು ಲ್ಯಾಂಪ್ಸ್ ಈಗಾಗಲೇ ಕಣ್ಮರೆಯಾಗಿದೆ. ಈಗ ಉಳಿದಿರುವ ಮೈಸೂರು ಬ್ಯಾಂಕ್ ಒಂದೇ. ಅದನ್ನೂ ಕೂಡ ಸ್ಟೇಟ್ ಆಫ್ ಇಂಡಿಯಾ ಜೊತೆ ವಿಲೀನ ಮಾಡಿದರೆ ವಿಶ್ವವಿಖ್ಯಾತ ಮೈಸೂರಿನ ಹೆಸರು ಅಳಿಸಿದಂತಾಗುತ್ತದೆ ಎಂದು ಹೆಳಿದರು.  ನಮ್ಮ ಪಾರಂಪರಿಕ ಹೆಸರುಗಳು ಉಳಿಯಬೇಕು. ಈ ಕಾಳಜಿಯ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸಿದ್ದಾಗಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin