ಕಿಮ್ ಜಾಂಗ್ ಉನ್ ಸಹೋದರನ ಹತ್ಯೆಯ ವಿಡಿಯೋ ಬಹಿರಂಗ : ರಾಜತಾಂತ್ರಿಕ ಸಂಘರ್ಷ ಉಲ್ಬಣ
ಕ್ವಾಲಾಲಂಪುರ್, ಫೆ.20-ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಮಲ ಸಹೋದರ ಕಿಮ್ ಜಾಂಗ್ ನಮ್ ಅವರನ್ನು ಮಲೇಷ್ಯಾ ರಾಜಧಾನಿಯಲ್ಲಿ ಹತ್ಯೆ ಮಾಡಿದ ಪ್ರಕರಣವು ದಿನಕ್ಕೊಂದು ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಪ್ರಕರಣವು ಉತ್ತರ ಕೊರಿಯಾ ಮತ್ತು ಮಲೇಷ್ಯಾ ನಡುವೆ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಿರುವಾಗಲೇ, ಪಯೊಂಗ್ಯಾಂಗ್ನಲ್ಲಿರುವ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿರುವುದಾಗಿ ಮಲೇಷ್ಯಾ ಹೇಳಿರುವುದು ಮತ್ತೊಂದು ಬಿಕ್ಕಟ್ಟಿಗೆ ಎಡೆ ಮಾಡಿಕೊಟ್ಟಿದೆ. ಇದೇ ವೇಳೆ ಕಳೆದ ವರ್ಷದ ಹತ್ಯೆಗೀಡಾದ ಕಿಮ್ ಜಾಂಗ್ ನಮ್ ಅವರ ಮೇಲೆ ನಡೆದಿದೆ ಎನ್ನಲಾದ ದೃಶ್ಯಾವಳಿ ಜಪಾನ್ನ ಟೆಲಿವಿಷನ್ಗೆ ಲಭಿಸಿದೆ.
ಪಯೊಂಗ್ಯಾಂಗ್ನಲ್ಲಿರುವ ಮಲೇಷ್ಯಾ ರಾಯಭಾರಿಯನ್ನು ಸಮಾಲೋಚನೆಗಾಗಿ ಕರೆಸಿಕೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ. ಈ ಸಂಬಂಧ ಕ್ವಾಲಾಲಂಪುರ್ನಲ್ಲಿರುವ ಉತ್ತರ ಕೊರಿಯಾ ರಾಯಭಾರಿಗೂ ಮಾತುಕತೆಗೆ ಬರುವಂತೆ ತಿಳಿಸಲಾಗಿದೆ.
ದಾಳಿ ದೃಶ್ಯ ಬಹಿರಂಗ :
ಕಿಮ್ ಜಾಂಗ್ನಮ್ ಅವರ ಹತ್ಯೆಗೆ ಸಂಬಂಧಪಟ್ಟಂತೆ ತನ್ನ ಬಳಿ ಭದ್ರತಾ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಾವಳಿ ಇರುವುದಾಗಿ ಜಪಾನಿನ ಫುಜಿ ಟಿವಿ ಹೇಳಿದೆ. ಕ್ವಾಲಾಲಂಪುರ್ದ ವಿಮಾನ ನಿಲ್ದಾಣದಲ್ಲಿ ಟಿಕೆಟ್ಗಾಗಿ ನಿಂತಿದ್ದ ನಮ್ ಬಳಿ ಇಬ್ಬರು ಮಹಿಳೆಯರು ಬರುವ ಮಬ್ಬಾದ ದೃಶ್ಯಗಳು ಈ ಫುಟೇಜ್ನಲ್ಲಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS