ಗೂಡ್ಸ್ ರೈಲಿಗೆ ಡಿಕ್ಕಿಯಾಗಿ ಹಳಿ ತಪ್ಪಿದ ಕಾಲಿಂದಿ ಎಕ್ಸ್ ಪ್ರೆಸ್ ರೈಲು

ಈ ಸುದ್ದಿಯನ್ನು ಶೇರ್ ಮಾಡಿ

Kalindi-Express

ಫಿರೋಜಾಬಾದ್, ಫೆ.20-ದೆಹಲಿಗೆ ತೆರಳುತ್ತಿದ್ದ ಕಾಲಿಂದಿ ಎಕ್ಸ್ ಪ್ರೆಸ್ , ಗ್ರೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿ ಹಲವರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಉತ್ತರ ಪ್ರದೇಶದ ತಾಂಡ್ಲಾ ಜಂಕ್ಷನ್‍ನಲ್ಲಿ ಸಂಭವಿಸಿದೆ. ಕಾನ್ಪುರದಿಂದ ಬರುತ್ತಿದ್ದ ಎಕ್ಸ್‍ಪ್ರೆಸ್, ಸಿಗ್ನಲ್ ದೋಷದಿಂಂದಾಗಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿತು. ಈ ದುರ್ಘಟನೆಯಲ್ಲಿ ಕೆಲವರು ಗಾಯಗೊಂಡಿದ್ಧಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.   ಕಾಲಿಂದಿ ಎಕ್ಸ್‍ಪ್ರೆಸ್‍ನ ಆರು ಬೋಗಿಗಳು ಹಳಿ ತಪ್ಪಿವೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ರೈಲು ಅಪಘಾತದಿಂದಾಗಿ ಕಾನ್ಪುರ-ದೆಹಲಿ ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆಯಾಗಿದ್ದು, ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin