ಬೆಳ್ಳಂದೂರು ಕೆರೆ ಬೆಂಕಿ, ಎಚ್ಛೆತ್ತುಕೊಳ್ಳದಿದ್ದರೆ ಬೆಂಗಳೂರಿಗೆ ಕಾದಿದೆ ಗಂಡಾಂತರ.

ಈ ಸುದ್ದಿಯನ್ನು ಶೇರ್ ಮಾಡಿ

Bellanduru--01

ಬೆಂಗಳೂರು,ಫೆ.20- ಸಿಲಿಕಾನ್ ಸಿಟಿಯ ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡ ಬೃಹತ್ ನೊರೆ ಮತ್ತು ಬೆಂಕಿ ಕೆನ್ನಾಲಿಗೆ ರಾಷ್ಟ್ರಮಟ್ಟದಲ್ಲಿ ಪರಿಸರ ಆತಂಕವನ್ನುಂಟು ಮಾಡಿದೆಯಲ್ಲದೆ, ಉದ್ಯಾನನಗರಿ ಬೆಂಗಳೂರಿಗೆ ಎಚ್ಚರಿಕೆಯ ಗಂಟೆಯಾಗಿದೆ.  ಬೆಂಗಳೂರಿನ ಪ್ರಾಚೀನ ಕೆರೆಗಳಾದ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಲ್ಲಿ ಕಳೆದ ಕೆಲವು ತಿಂಗಳಿನಿಂದ ನೊರೆ ಕಾಣಿಸಿಕೊಂಡು ಬೃಹತ್ ಪ್ರಮಾಣದ ಬೆಂಕಿ ಆವರಿಸಿ ಉರಿಯತೊಡಗಿತ್ತು. ಇದರಿಂದ ಸಾರ್ವಜನಿಕರಲ್ಲಿ ತೀವ್ರ ಆತಂಕವುಂಟು ಮಾಡಿದೆ.   ಬೆಳ್ಳಂದೂರು ಕೆರೆಯಲ್ಲಿ ಮೊನ್ನೆ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಂಡ ಬುರುಗು ಮತ್ತು ಬೆಂಕಿಯಿಂದಾಗಿ ದಟ್ಟ ಹೊಗೆ ಕಾಣಿಸಿಕೊಂಡಿರುವುದು ಮುಂದೆ ಒದಗಬಹುದಾದ ಗಂಡಾಂತರಕ್ಕೆ ಕೈ ಕನ್ನಡಿಯಾಗಿದೆ.  ಕೆರೆಯಲ್ಲಿ ಅತ್ಯಕವಾದ ವಿಷಕಾರಿ ಅಂಶವುಳ್ಳ ನಾನಾ ವಿಧದ ರಾಸಾಯನಿಕಗಳು ಸೇರಿ ನೀರು ಸಂಪೂರ್ಣ ಕಲುಷಿತವಾಗಿದೆ. ಇದು ಕೇವಲ ಜಲಚರಗಳಿಗಷ್ಟೇ ಅಲ್ಲದೆ ಸುತ್ತಮುತ್ತಲ ನಿವಾಸಿಗಳಿಗೂ ಅಪಾಯಕಾರಿಯಾಗಿದೆ.

ಸುತ್ತಮುತ್ತಲ ಕೈಗಾರಿಕೆಗಳಿಂದ ಈ ಕೆರೆಗೆ ಸೇರುತ್ತಿರುವ ವಿಷಯುಕ್ತ ರಾಸಾಯನಿಕಗಳಿಂದಾಗಿ ನೀರು ಸಂಪೂರ್ಣ ಮಲಿನಗೊಂಡಿದೆ. ಮೊನ್ನೆ ಕಾಣಸಿಕೊಂಡಿರುವ ಬೆಂಕಿ ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಕೂಡ ರಾಸಾಯನಿಕ ಪ್ರತಿಕ್ರಿಯಿಂದ ಕಿಡಿ ರೂಪದಲ್ಲಿ ಬೆಂಕಿ ಹೊತ್ತಿಕೊಂಡು ಆತಂಕ ಸೃಷ್ಟಿಸಿತ್ತು.   ಈಗಾಗಲೇ ಬೆಳ್ಳಂದೂರು ವಾಸಿಗಳಿಗೆ ಇದರ ದುಷ್ಪರಿಣಾಮದ ಅನುಭವಗಳಾಗಿವೆ. ಅಲರ್ಜಿ, ಅಸ್ತಮ, ಕೆಮ್ಮು , ಜ್ವರ, ತಲೆನೋವು ಇತ್ಯಾದಿ ಅನಾರೋಗ್ಯದ ಲಕ್ಷಣಗಳು ಬಾಸುತ್ತಿವೆ. ಈ ನಡುವೆ ಮೊನ್ನೆ ಮತ್ತೆ ದಟ್ಟವಾದ ಬೆಂಕಿ ಹೊತ್ತಿ ಉರಿದಿರುವುದರಿಂದ ಇಲ್ಲಿನ ವಾಸಿಗಳು ಮತ್ತಷ್ಟು ಕಂಗಾಲಾಗಿದ್ದಾರೆ.   ಬೆಳ್ಳಂದೂರು ಕೆರೆಯ ಮಾಲಿನ್ಯದ ದುಷ್ಪರಿಣಾಮದ ಬಗ್ಗೆ ರಾಷ್ಟ್ರೀಯ ವಾರ್ತಾ ವಾಹಿನಿಗಳಲ್ಲೂ ಪ್ರಮುಖ ವಿಷಯವಾಗಿ ವರದಿಯಾಗಿವೆ. ಸರ್ಕಾರ ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳದಿದ್ದರೆ ಬೆಂಗಳೂರಿನಲ್ಲಿ ಅಳಿದುಳಿದಿರುವ ಪ್ರಾಚೀನ ಕೆರೆಗಳಿಗೂ ಮುಂದೊಂದು ದಿನ ಇದೇ ರೀತಿಯ ದುಸ್ಥಿತಿ ಬಂದೊದಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin