ಎಟಿಎಂ ಲೂಟಿ ಮಾಡಲು ಬಂದ ಕಳ್ಳರಿಗೆ ಕಾದಿತ್ತು ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ATM-Loot

ಉತ್ತರಪ್ರದೇಶ, ಫೆ.21-ಎಟಿಎಂ ಲೂಟಿ ಮಾಡಿದ ಕಳ್ಳರಿಗೆ ಶಾಕ್ ಕಾದಿತ್ತು. ಭಾರೀ ಹಣ ಸಿಗಬಹುದೆಂಬ ನಿರೀಕ್ಷೆಯಲ್ಲಿ ಈ ಕಳ್ಳರು ಶೆಟರ್ ಮುರಿದು ಎಟಿಎಂನ್ನು ಹೊಡೆದು ಹಾಕಿ ನೋಡಿದರೆ ಅದರಲ್ಲಿ ಹಣವೇ ಇರಲಿಲ್ಲ. ಉತ್ತರ ಪ್ರದೇಶದ ಧಾನ್‍ಕುರ್‍ನಲ್ಲಿ ಈ ಘಟನೆ ನಡೆದಿದೆ.  ಆಕ್ಸಿಸ್ ಬ್ಯಾಂಕ್‍ನ ಎಟಿಎಂಗೆ ಭಾನುವಾರ ರಾತ್ರಿ 10ಗಂಟೆಗೆ ಹಣ ತುಂಬಬೇಕಿತ್ತು. ಆದರೆ ಬ್ಯಾಂಕ್‍ನವರು ಹಣ ತುಂಬಿರಲಿಲ್ಲ. ಈ ವಿಷಯ ಕಳ್ಳರಿಗೆ ಹೇಗೆ ಗೊತ್ತಾಗಬೇಕು. ಗ್ಯಾಸ್ ಕಟರ್‍ನಿಂದ ಎಟಿಎಂ ಮೆಷಿನ್ ಒಡೆದು ನೋಡಿದರೆ ಮೆಷಿನ್ ಬಣಬಣ ಎನ್ನುತ್ತಿತ್ತು.  ಈ ಸಂಬಂಧ ಧಾನ್‍ಕುರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಟಿಎಂ ಲೂಟಿಕೋರರಿಗೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿ ರಾಜ್‍ ಪೋಲ್ ಥಾಮಸ್ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin