ಗುಜರಿ ಸೇರಲಿದೆ ಭಾರತದ ಹಳೇ ಯುದ್ಧನೌಕೆ ಐಎನ್‍ಎಸ್ ವಿರಾಟ್ ..!

ಈ ಸುದ್ದಿಯನ್ನು ಶೇರ್ ಮಾಡಿ

INS-Virat--01

ನವದೆಹಲಿ, ಫೆ.21-ಭಾರತೀಯ ನೌಕಾಪಡೆಯ ಅತ್ಯಂತ ಹಳೆಯ ಯುದ್ಧ ನೌಕೆ-ಐಎನ್‍ಎಸ್ ವಿರಾಟ್ ಈಗ ಗುಜರಿಯಲ್ಲಿ ಮಾರಾಟವಾಗಲಿದೆ..! ಮೂರು ದಶಕಗಳ ವೈಭವದ ಸೇವೆ, ಸಂಕಷ್ಟ ಪರಿಸ್ಥಿತಿಯಲ್ಲಿ ನೌಕಾಪಡೆಗೆ ನೀಡಿದ್ದ ನೆರವು, ಭಾರತೀಯ ಸಮರಕೌಶಲ್ಯದ ಪ್ರತಿರೂಪ-ಇವೆಲ್ಲವೂ ಈಗ ಗುಜರಿಯಲ್ಲಿ ಬಿಕರಿಯಾಗಲಿದೆ.   58 ವರ್ಷಗಳಷ್ಟು ಹಳೆದಾದ (30 ವರ್ಷಗಳ ನಿರಂತರ ಸೇವೆ) ಸಾಗರದಲ್ಲಿ ಯುದ್ಧ ವಿಮಾನಗಳನ್ನು ಹೊತ್ತೊಯ್ಯುತ್ತಿದ್ದ ಐಎನ್‍ಎಸ್ ವಿರಾಟ್ ನೌಕೆ ಮಾರ್ಚ್ 6ರಂದು ನಿವೃತ್ತಿಯಾಗಲಿದೆ. ಈ ಹಳೆಯ ನೌಕೆಯನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಬೇಕೆಂಬ ಪ್ರಸ್ತಾವನೆ ಯಾವುದೇ ಸ್ಪಷ್ಟರೂಪ ಪಡೆದಿಲ್ಲದ ಕಾರಣ ಗುಜರಿ ಪಾಲಾಗುವುದು ಬಹುತೇಕ ಖಚಿತವಾಗಿದೆ.

1987ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುವುದಕ್ಕೂ ಮುನ್ನ 27,800 ಟನ್ನುಗಳ ಈ ನೌಕೆಯು ರಾಯಲ್ ಬ್ರಿಟಿಷ್ ನೆವಿಯಲ್ಲಿ 27 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿತ್ತು. ಮ್ಯೂಸಿಯಂ ಆಗಿ ಪರಿವರ್ತಿಸುವ ಪ್ರಸ್ತಾವನೆಗೆ ಆಂಧ್ರಪ್ರದೇಶ ಮತ್ತು ಕೇಂದ್ರ ಸರ್ಕಾರದ ನಡುವಣ ಭಿನ್ನಾಭಿಪ್ರಾಯದಿಂದಾಗಿ ಈಗ ಇದು ಗುಜರಿ ಸೇರಲಿದೆ ಎಂಧು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ.   13 ಅಂತಸ್ತುಗಳಷ್ಟು ಎತ್ತರದ ಐಎನ್‍ಎಸ್ ವಿರಾಟ್‍ನನ್ನು ಏರ್‍ಕ್ರಾಫ್ಟ್ ಕ್ಯಾರಿಯರ್ ಮ್ಯೂಸಿಯಂ ಆಗಿ ಪರಿವರ್ತಿಸಲು ಸುಮಾರು 1,000 ಕೋಟಿ ರೂ.ಗಳು ಬೇಕಾಗುತ್ತದೆ. ಅಲ್ಲದೇ ಇದನ್ನು ಪರಿವರ್ತಿಸಿವುದು ತ್ರಾಸದಾಯಕ ಕಾರ್ಯ. ಈ ಕಾರಣಗಳಿಂದ ಆ ಪ್ರಸ್ತಾವನೆ ನೆನೆಗುದಿಗೆ ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

ಮಾರ್ಚ್ 6ರ ನಂತರ ಮುಂಬೈನಲ್ಲಿ ಈ ನೌಕೆಯನ್ನು ಒಡೆಯುವ ಕಾರ್ಯ ಆರಂಭವಾಗಲಿದೆ. ಹಳೆಯ ಹಡಗುಗಳನ್ನು ಒಡೆಯುವುದು ಈಗ ಅತ್ಯಂತ ಲಾಭದಾಯವಾಗಿರುವುದರಿಂದ ಗುಜರಿಗೆ ಹಾಕುವ ಬಗ್ಗೆಯೇ ಹೆಚ್ಚು ಒಲವು ವ್ಯಕ್ತವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin