ಚಿನ್ನಮ್ಮ ಚೆನ್ನೈ ಗೆ ಶಿಫ್ಟ್ ಆಗೋದು ಬಹುತೇಕ ಖಚಿತ

ಈ ಸುದ್ದಿಯನ್ನು ಶೇರ್ ಮಾಡಿ

Sasikala--01

ಬೆಂಗಳೂರು,ಫೆ.21- ಅಕ್ರಮ ಆಸ್ತಿ ಸಂಪಾದನೆ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಆಪ್ತ ಗೆಳತಿ ಶಶಿಕಲಾ ನಟರಾಜನ್ ಚೆನ್ನೈಗೆ ಜೈಲಿಗೆ ಶಿಫ್ಟಾಗುವುದು ಬಹುತೇಕ ಖಚಿತವಾಗಿದೆ.   ಬೆಂಗಳೂರಿಗೆ ಆಗಮಿಸಿರುವ ಎಐಎಡಿಎಂಕೆ ಉಪಪ್ರಧಾನ ಕಾರ್ಯದರ್ಶಿ ಹಾಗೂ ಶಶಿಕಲಾ ನಟರಾಜನ್ ಅವರ ಸಂಬಂಧಿ ಟಿಟಿಟಿ ದಿನಕರನ್ ವಕೀಲರ ಜೊತೆ ಮಾತುಕತೆ ನಡೆಸಿದ್ದಾರೆ.  ಶಶಿಕಲಾ ನಟರಾಜನ್ ಅವರನ್ನು ಚೆನ್ನೈಗೆ ವರ್ಗಾಯಿಸಲು ಯಾವುದೇ ಕಾನೂನಿನ ಸಮಸ್ಯೆ ಎದುರಾಗಿಲ್ಲ.  ಕರ್ನಾಟಕ ಸರ್ಕಾರ ಅಭ್ಯಂತರ ಮಾಡದಿದ್ದರೆ ವರ್ಗಾಯಿಸಲು ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ಅವರ ಪರ ವಕೀಲ ಎನ್‍ಡಿಎಸ್ ಕುಲಶೇಖರನ್ ತಿಳಿಸಿದ್ದಾರೆ.

ಈಗಾಗಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದ್ದು , ಕರ್ನಾಟಕದಿಂದ ತಕರಾರು ಅರ್ಜಿ ಸಲ್ಲಿಕೆಯಾಗದಿದ್ದರೆ ನ್ಯಾಯಾಧೀಶರಿಗೆ ನಾವು ಮನವರಿಕೆ ಮಾಡಲಿದ್ದೇವೆ. ಕಾನೂನಿನ ಪ್ರಕಾರ ಅಂತಾರಾಜ್ಯಕ್ಕೆ ಒಬ್ಬ ಅಪರಾಧಿಯನ್ನು ವರ್ಗಾಯಿಸಲು ಅವಕಾಶವಿದೆ. ಮೂರ್ನಾಲ್ಕು ದಿನಗಳಲ್ಲಿ ಕಾನೂನು ಪ್ರಕ್ರಿಯೆಗಳು ಪೂರ್ಣವಾಗಲಿದೆ ಎಂದು ಹೇಳಿದ್ದಾರೆ.
ಕಳೆದ 14ರಂದು ಶಶಿಕಲಾ ಗೆಳತಿ ಜೆ.ಇಳವರಸಿ ಹಾಗೂ ದತ್ತು ಪುತ್ರ ವಿ.ಎನ್.ಸುಧಾಕರನ್ ಅಕ್ರಮ ಆಸ್ತಿ ಸಂಪಾದನೆ ಮೇಲೆ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಸುಪ್ರೀಂಕೋರ್ಟ್ ಈ ಮೂವರನ್ನು ಅಪರಾಧಿಗಳೆಂದು ತೀರ್ಪು ನೀಡಿತ್ತು.

ವಿಚಾರಣೆ ಪೂರ್ಣಗೊಂಡು ತೀರ್ಪು ಹೊರಬಂದಿರುವುದರಿಂದ ನಾವು ಚೆನ್ನೈಗೆ ಜೈಲಿಗೆ ವರ್ಗಾಯಿಸಲು ಈಗಾಗಲೇ ಪರಪ್ಪನ ಅಗ್ರಹಾರದ ಜೈಲಿನ ಅಧೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದೇವೆ.
ಜೊತೆಗೆ ವಿಶೇಷ ನ್ಯಾಯಾಲಯಕ್ಕೂ ಮನವಿ ಮಾಡಲಾಗಿದೆ. ನ್ಯಾಯಾಲಯವು ಇದನ್ನು ಸಕಾರಾತ್ಮಕವಾಗಿ ಪರಿಗಣಿಸುವ ಸಾಧ್ಯತೆ ಇದೆ ಎಂಬ ಆಶಾಭಾವನೆ ಅವರ ವಕೀಲರಿಂದ ವ್ಯಕ್ತವಾಗಿದೆ. ಆದರೆ ಹಿರಿಯ ವಕೀಲರೊಬ್ಬರು ಹೇಳುವಂತೆ ಸುಪ್ರೀಂಕೋರ್ಟ್ ನಿರ್ದೇಶನವಿಲ್ಲದೆ ಶಶಿಕಲಾ ಅವರನ್ನು ವರ್ಗಾಯಿಸಲು ಸಾಧ್ಯವಿಲ್ಲ.   ಅವರ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ಇತ್ಯರ್ಥವಾಗಿರುವುದರಿಂದ ಯಾವ ಕಾರಣಕ್ಕಾಗಿ ನಾವು ಚೆನ್ನೈ ಜೈಲಿಗೆ ಹೋಗುತ್ತಿದ್ದೆಂಬುದನ್ನು ಮನವರಿಕೆ ಮಾಡಬೇಕು. ಬಳಿಕ ಕೆಳಹಂತದ ನ್ಯಾಯಾಲಯಕ್ಕೆ ಅರ್ಜಿಯನ್ನು ಪರಿಗಣಿಸಿ ಎಂದು ನಿರ್ದೇಶನ ಬಂದರೆ ಮಾತ್ರ ಇದು ಸಾಧ್ಯವಾಗುವ ಮಾತು. ಉಳಿದಂತೆ ಅಪೆಕ್ಸ್ ಕೋರ್ಟ್ ಇತ್ಯರ್ಥಪಡಿಸಲು ಸಾಧ್ಯವಿಲ್ಲ ಎಂದು ಹಿರಿಯ ವಕೀಲರೊಬ್ಬರು ಹೇಳಿದ್ದಾರೆ.

ಅಪರಾಧಿಯೊಬ್ಬರಿಗೆ ಜೈಲಿನಲ್ಲಿ ಬೆದರಿಕೆ, ಆರೋಗ್ಯ ಸಮಸ್ಯೆ ಇದೆ ಎಂಬುದು ದೃಢವಾಗಬೇಕು. ಇದನ್ನು ಜೈಲಿನ ಅಧೀಕ್ಷಕರು ಪರಿಶೀಲಿಸಿ ಅವರಿಗೆ ಸಹ ಕೈದಿಗಳಿಂದ ಬೆದರಿಕೆ ಇದೆ ಎಂಬುದು ಸಾಬೀತಾದರೆ ನ್ಯಾಯಾಲಯದ ಗಮನಕ್ಕೆ ತರಬೇಕು.   ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಎದುರಾಗಿದ್ದರೆ ಅವರ ಕೋರಿಕೆಯಂತೆ ನ್ಯಾಯಾಧೀಶರು ಮಾನವೀಯತೆ ದೃಷ್ಟಿಯಿಂದ ವರ್ಗಾಯಿಸಲು ಅವಕಾಶ ನೀಡಬಹುದು. ಅಂತಿಮವಾಗಿ ಸುಪ್ರೀಂಕೋರ್ಟ್ ನೀಡುವ ನಿರ್ದೇಶನದ ಮೇರೆಗೆ ಇವೆಲ್ಲವೂ ಅವಲಂಬಿತವಾಗಿದೆ.   ಸದ್ಯಕ್ಕೆ ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇವರ ಪಕ್ಕದ ಸೆಲ್‍ನಲ್ಲೆ ಸೈನೆಡ್ ಮಲ್ಲಿಕಾ ಇರುವ ಕಾರಣ ವಿಶೇಷ ಭದ್ರತೆಯನ್ನು ನೀಡಲಾಗಿದೆ.   ವಿಶೇಷ ಕೊಠಡಿ, ಟೀವಿ, ದಿನಪತ್ರಿಕೆ, ಮೂವರು ಭದ್ರತಾ ಸಿಬ್ಬಂದಿ, ಓರ್ವ ಸಹಾಯಕಿ, ಪ್ರತ್ಯೇಕ ಶೌಚಾಲಯ ಸೇರಿದಂತೆ ಇತರ ಸವಲತ್ತುಗಳನ್ನು ನೀಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin