ಟೆಕ್ಆಫ್ ಆಗುವಾಗ ಸ್ಪೋಟಗೊಂಡು ಮಾಲ್‍ಗೆ ಅಪ್ಪಳಿಸಿದ ವಿಮಾನ, ಐವರ ಸಾವು (Video)

ಈ ಸುದ್ದಿಯನ್ನು ಶೇರ್ ಮಾಡಿ

Plane-Crsash

ಮೆಲ್ಬೊರ್ನ್, ಫೆ.21-ಆಗಷ್ಟೇ ಮೇಲೇರುತ್ತಿದ್ದ ಲಘು ವಿಮಾನವೊಂದು ಸ್ಟೋಟಗೊಂಡು, ಬೆಂಕಿಯ ಉಂಡೆಯಾಗಿ ಹತ್ತಿರ ಶಾಪಿಂಗ್ ಸೆಂಟರ್‍ಗೆ ಅಪ್ಪಳಿಸಿ ಐವರು ಮೃತಪಟ್ಟಿರುವ ದುರಂತ ಆಸ್ಪ್ರೇಲಿಯಾದ ಮೆಲ್ಬೊರ್ನ್ ನಗರದಲ್ಲಿ ಸಂಭವಿಸಿದೆ.   ಮೆಲ್ಬೊರ್ನ್‍ನ ಎಸ್ಸೆನ್‍ಡಾನ್ ಫೀಲ್ಡ್ಸ್ ಏರ್‍ಪೋರ್ಟ್‍ನಲ್ಲಿ ಇಂದು ಬೆಳಿಗ್ಗೆ ಗಗನಕ್ಕೇರುತ್ತಿದ್ದ ವಿಮಾನ ಮುಗ್ಗರಿಸಿ ಸ್ಫೋಟಗೊಂಡಿತು. ನಂತರ ಅದು ವಿಮಾನನಿಲ್ದಾಣದ ಪಕ್ಕದಲ್ಲಿದ್ದ ಶಾಪಿಂಗ್ ಸೆಂಟರ್‍ಗೆ ಅಪ್ಪಳಿಸಿ ಛಿದ್ರಗೊಂಡಿತು. ಈ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ ಐವರು ಮೃತಪಟ್ಟರು ಎಂದು ವಿಕ್ಟೋರಿಯಾ ಪೊಲೀಸ್ ಇಲಾಖೆಯ ಸಹಾಯಕ ಆಯುಕ್ತ ಸ್ಟೆಫೆನ್ ಸಿಯಾನ್ ತಿಳಿಸಿದ್ದಾರೆ.

ಈ ರಾಜ್ಯದಲ್ಲಿ ಕಳೆದ ಮೂರು ದಶಕದಲ್ಲಿ ಸಂಭವಿಸಿದ ಅತ್ಯಂತ ಭೀಕರ ವಿಮಾನ ಅಪಘಾತ ಇದಾಗಿದೆ ಎಂದು ವಿಕ್ಟೋರಿಯಾ ಪ್ರಾಂತ್ಯದ ಮುಖ್ಯಸ್ಥ ಡೇನಿಯಲ್ ಅಂಡ್ರ್ಯೂಸ್ ಹೇಳಿದ್ದಾರೆ.
ವಿಮಾನ ಸ್ಫೋಟಗೊಂಡು ಬೆಂಕಿಯ ಚೆಂಡಾಯಿತು. ಬಳಿಕ ಅದು ಮುಚ್ಚಲ್ಪಟ್ಟಿದ್ದ ಶಾಪಿಂಗ್ ಮಾಲ್‍ಗೆ ಅಪ್ಪಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ವಿಮಾನ ಅಪ್ಪಳಿಸಿದ್ದರಿಂದ ಶಾಪಿಂಗ್ ಸೆಂಟರ್ ಮತ್ತು ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿಯಾಗಿದೆ.   ಎಂಜಿನ್ ದೋಷವೇ ಈ ದುರಂತಕ್ಕೆ ಕಾರಣವೆಂದು ವಿಮಾನನಿಲ್ದಾಣದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin