ತಿಮ್ಮಪ್ಪನಿಗೆ 5 ಕೋಟಿ ಮೌಲ್ಯದ ಚಿನ್ನದ ಮುಕುಟ ಅರ್ಪಿಸಿದ ಹರಕೆ ತೀರಿಸಿದ ತೆಲಂಗಾಣ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

tirupati

ಹೈದ್ರಾಬಾದ್,ಫೆ.21- ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನಾಳೆ ತಿರುಪತಿ ತಿಮ್ಮಪ್ಪನಿಗೆ 5 ಕೋಟಿ ಮುಖಬೆಲೆಯ ಬಂಗಾರದ ಮುಕುಟವನ್ನು ಅರ್ಪಿಸಲಿದ್ದಾರೆ.   ಆಂಧ್ರಪ್ರದೇಶದಿಂದ ತೆಲಂಗಾಣ ಬೇರ್ಪಟ್ಟರೆ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಮುಕುಟವನ್ನು ಅರ್ಪಿಸುತ್ತೇನೆ ಎಂದು ಕೆಸಿಆರ್ ಹರಕೆ ಕಟ್ಟಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.  2014ರಲ್ಲಿ ತೆಲಂಗಾಣ ಹೊಸ ರಾಜ್ಯವಾಗಿ ರೂಪುಗೊಂಡ ಬೆನ್ನಲ್ಲೇ ಕೆಸಿಆರ್ 3 ಕೋಟಿ ಚಿನ್ನದ ಕಿರೀಟವನ್ನು ವರಂಗಲ್‍ದಲ್ಲಿರುವ ಭದ್ರಕಾಳಿ ದೇವರಿಗೆ ಅರ್ಪಿಸಿದ್ದರು.  ಈಗ ತಿರುಪತಿ ತಿಮ್ಮಪ್ಪನಿಗೆ 5.6 ಕೋಟಿ ಮೌಲ್ಯದ ಚಿನ್ನದ ಕಿರೀಟವನ್ನು ಹಾಗೂ ಪದ್ಮಾವತಿಗೆ ಚಿನ್ನದ ಮೂಗುತಿಯನ್ನು ನಾಳೆ ಸಮರ್ಪಿಸಲಿದ್ದಾರೆ.  ಇದಕ್ಕಾಗಿ ನಾಳೆ ಕುಟುಂಬ ಸಮೇತವಾಗಿ ಆಂಧ್ರದಿಂದ ಕೆಸಿಆರ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಹೊರಡಲಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin