ಥೈಲೆಂಡ್‍ನ ಬೌದ್ಧ ದೇಗುಲದಲ್ಲಿ ಮಾರಾಮಾರಿ, ಹಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Thailand--01

ಬ್ಯಾಂಕಾಕ್, ಫೆ.21-ಶಾಂತಿ ಬೋಧಿಸುವ ಬೌದ್ಧ ಮಂದಿರವೊಂದರ ಮೇಲೆ ಪೊಲೀಸರು ನಡೆಸಿದ ದಾಳಿ ವೇಳೆ ನಡೆದ ಘರ್ಷಣೆಯಲ್ಲಿ ಹಲವು ಮಂದಿ ಗಾಯಗೊಂಡಿರುವ ಘಟನೆ ಥೈಲೆಂಡ್‍ನ ಪಥುಮ್‍ನ ಧಮ್ಮಕಾಯ ದೇವಾಲಯದಲ್ಲಿ ನಡೆದಿದೆ. ಈ ಸಂಬಂಧ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.   ಮಂದಿರದಲ್ಲಿ ಬೌದ್ಧ ಬಿಕ್ಕುಗಳನ್ನು ತೆರವುಗೊಳಿಸಲು ಹಾಗೂ ಬಸದಿಯಲ್ಲಿ ವಿವಾದಾತ್ಮಕ ಮುಖ್ಯಸ್ಥನಿಗಾಗಿ ಶೋಧ ನಡೆಸಲು ಪೊಲೀಸರು ದೇವಾಲಯದ ಮೇಲೆ ನಿನ್ನೆ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಸನ್ಯಾಸಿಗಳು ಮತ್ತು ಪೊಲೀಸರ ನಡುವೆ ಮಾರಾಮಾರಿ ನಡೆದು ಹಲವರು ಗಾಯಗೊಂಡರು. ಈ ಘರ್ಷಣೆಯಲ್ಲಿ ಕೆಲ ಭಕ್ತರಿಗೂ ಗಾಯಗಳಾಗಿವೆ.

ಸರ್ಕಾರಿ ಜಾಗದ ಒತ್ತುವರಿ, ಹಣ ದುರ್ಬಳಕೆ ಹಾಗೂ ಧರ್ಮದ ಹೆಸರಿನಲ್ಲಿ ಭಾರೀ ಹಣ ಸಂಗ್ರಹ ಸೇರಿದಂತೆ ಹಲವಾರು ಆರೋಪಗಳಿಗೆ ಗುರಿಯಾಗಿರುವ ದೇವಸ್ಥಾನದ ಮಾಜಿ ಮುಖ್ಯಸ್ಥ ಫ್ರಾ ಧಮ್ಮಚಾಯೋ ಅವರಿಗಾಗಿ ಹಲವು ದಿನಗಳಿಂದ ಪೊಲೀಸರು ವಿವಿಧ ಬೌದ್ಧ ಮಂದಿರಗಳಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin