ಗರ್ಭಿಣಿ ಅನುಮಾನಾಸ್ಪದ ಸಾವು, ಮನೆ ಮುಂದೆ ಶವವಿಟ್ಟು ಗಂಡನ ಬಂಧನಕ್ಕೆ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

kolara
ಕೋಲಾರ, ಫೆ.22- ಗರ್ಭಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕುಟುಂಬಸ್ಥರು ಶವವನ್ನು ಮನೆ ಮುಂದೆ ಇಟ್ಟು ಗಂಡನನ್ನು ಬಂಧಿಸಬೇಕೆಂದು ಪ್ರತಿಭಟನೆ ಮಾಡಿರುವ ಘಟನೆ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮಾಲೂರು ತಾಲೂಕು ಮಾಕರಹಳ್ಳಿ ಗ್ರಾಮದ ನಿವಾಸಿ ತಿಮ್ಮಕ್ಕ (24) ಮೃತಪಟ್ಟ ಗರ್ಭಿಣಿ.ಮಿಟ್ಟೆಗಾನಹಳ್ಳಿಯಲ್ಲಿ ತಿಮ್ಮಕ್ಕ ಎಂಬುವರು ಮಾಲೂರು ತಾಲೂಕಿನ ಮಾಕರಹಳ್ಳಿ ಗ್ರಾಮದ ರಮೇಶ್ ಎಂಬುವರ ಜತೆ ಕಳೆದ ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದು, ಮಾವ ವೆಂಕಟರಾಮಪ್ಪ, ಅತ್ತೆ ಜಯಮ್ಮ ಜತೆ ವಾಸಿಸುತ್ತಿದ್ದರು.ತಿಮ್ಮಕ್ಕ 5 ತಿಂಗಳ ಗರ್ಭಿಣಿಯಾಗಿದ್ದು, ನಿನ್ನೆ ರಾತ್ರಿ 9 ಗಂಟೆ ಸಮಯದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಮೃತಳ ಶವ ಹಾಸಿಗೆ ಮೇಲೆ ಮಲಗಿದ್ದಂತೆ ಇದ್ದು, ಗಂಡ, ಮಾವ, ಅತ್ತೆ ತಿಮ್ಮಕ್ಕನ ಪೋಷಕರಿಗೆ ವಿಷಯ ತಿಳಿಸಿ ಪರಾರಿಯಾಗಿದ್ದಾರೆ. ಮೃತಳ ಪೋಷಕರು ಇದು ಸಹಜ ಸಾವಲ್ಲ, ವರದಕ್ಷಿಣೆಗೋಸ್ಕರ ಗಂಡನ ಮನೆಯವರು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಕುಟುಂಬಸ್ಥರು ಮನೆ ಮುಂದೆ ಪತಿ ಮತ್ತು ಪತಿಯ ಕುಟುಂಬದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಶವವನ್ನು ಮನೆ ಮುಂದಿಟ್ಟು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್‍ಪಿ ಅಬ್ದುಲ್ ಸತ್ತಾರ್ ಪರಿಶೀಲಿಸಿದ್ದು, ಪಿಎಸ್‍ಐ ಗಿರೀಶ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin