ಮಾಲಿನ್ಯ ನಿಯಂತ್ರಣ ನೀತಿ ಉಲ್ಲಂಘಿಸುವ ಕೈಗಾರಿಕೆಗಳಿಗೆ ವಿದ್ಯುತ್ ಕಟ್ ಮಾಡಿ : ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

Pollution--01

ನವದೆಹಲಿ, ಫೆ.22-ಮಾಲಿನ್ಯ ನಿಯಂತ್ರಣ ನೀತಿ ಉಲ್ಲಂಘನೆ ಮಾಡುವ ಕೈಗಾರಿಕಾ ಘಟಕಗಳಿಗೆ ನೋಟಿಸ್‍ಗಳನ್ನು ನೀಡುವಂತೆ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳ ಪರಿಸರ ನಿಯಂತ್ರಣ ಮಂಡಳಿಗಳಿಗೆ ಸುಪ್ರೀಂಕೋರ್ಟ್ ತಿಳಿಸಿದೆ. ಅಲ್ಲದೇ ತಪ್ಪಿಸ್ಥತ ಕೈಗಾರಿಕೆಗಳ ವಿದ್ಯುತ್ ಪೂರೈಕೆ ಸೌಲಭ್ಯವನ್ನೂ ನಿಲ್ಲಿಸುವಂತೆಯೂ ಸೂಚನೆ ನೀಡಲಾಗಿದೆ.
ಕೈಗಾರಿಕೆಗಳಿಂದ ಹೊರಸೂಸಲ್ಪಡುವ ಕಷ್ಮಲಗಳ ಸಂಸ್ಕರಣೆಗಾಗಿ ಪ್ರಾಥಮಿಕ ಉಪಚಾರ ಘಟಕಗಳನ್ನು (ಎಫ್ಯುಲೆಂಟ್ ಟ್ರೀಟ್‍ಮೆಂಟ್ ಪ್ಲಾಂಟ್) ಸ್ಥಾಪಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಈ ಕೂಡಲೇ ಎಲ್ಲ ಕೈಗಾರಿಕೆಗಳಿಗೆ ಸಾಮಾನ್ಯ ನೋಟಿಸ್‍ಗಳನ್ನು ನೀಡುವಂತೆಯೂ ನ್ಯಾಯಾಲಯ ಸೂಚಿಸಿದೆ.

ಎಫ್ಯುಲೆಂಟ್ ಟ್ರೀಟ್‍ಮೆಂಟ್ ಪ್ಲಾಂಟ್ ಸ್ಥಾಪಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ನೋಟಿಸ್ ಅವಧಿ ಮುಗಿದ (ಮೂರು ತಿಂಗಳು) ನಂತರ ಎಲ್ಲ ಕೈಗಾರಿಕೆಗಳಿಗೆ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಬೇಕು. ಅವು ದೋಷಪೂರಿತವಾಗಿದ್ದರೆ, ಅಂಥ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಅವಕಾಶ ನೀಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪೀಠವು ಸೂಚಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin